Ind Vs SA | ಡಿ ಕಾಕ್ ಸ್ಥಾನದಲ್ಲಿ ಬಂದ.. ದಾಖಲೆ ಮುರಿದ
ಟೀಂ ಇಂಡಿಯಾ ವಿರುದ್ಧದ ಎರಡನೇ T20I ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಗೆಲುವಿನಲ್ಲಿ ಪ್ರೋಟಿಯಸ್ ವಿಕೆಟ್ ಕೀಪರ್–ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ಪ್ರಮುಖ ಪಾತ್ರ ವಹಿಸಿದರು.
ನಾಯಕ ತೆಂಬಾ ಬೌಮಾ (35) ಅವರನ್ನು ಹೊರತುಪಡಿಸಿದರೆ, ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು.
ಕಟಕ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಒಟ್ಟು 46 ಎಸೆತಗಳನ್ನು ಎದುರಿಸಿದ ಕ್ಲಾಸೆನ್ 7 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರು. ಇದು ಕ್ಲಾಸೆನ್ ಕ್ರಿಕೆಟ್ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ.
ಈ ಅನುಕ್ರಮದಲ್ಲಿ ಕ್ಲಾಸೆನ್ ಕ್ವಿಂಟನ್ ಡಿ ಕಾಕ್ ದಾಖಲೆ ಮುರಿದಿದ್ದಾರೆ.
T20 ಮಾದರಿಯಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾದ ಬ್ಯಾಟರ್ ಗಳಿಸಿದ ಬಿಗ್ ಸ್ಕೋರ್ ಇದೆ ಆಗಿದೆ.
ಇದಕ್ಕೂ ಮೊದಲು ಈ ದಾಖಲೆ ಕ್ವಿಂಟನ್ ಹೆಸರಿನಲ್ಲಿತ್ತು. 2019ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಡಿ ಕಾಕ್ 79 ರನ್ ಗಳಿಸಿ ಅಜೇಯರಾಗಿದ್ದರು.

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ 2ನೇ ಪಂದ್ಯಕ್ಕೆ ಕ್ಲಾಸೆನ್ ಅಂತಿಮ ಕ್ಷಣದಲ್ಲಿ ಆಯ್ಕೆ ಆದರು.
ಅಲ್ಲದೆ ಮಿಂಚಿನ ಇನ್ನಿಂಗ್ಸ್ ಆಡಿ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟರು.
ಪಂದ್ಯದ ಬಳಿಕ ಮಾತನಾಡಿದ ಅವರು, ಬಸ್ ನಲ್ಲಿದ್ದಾಗ ಡಿ ಕಾಕ್ ಗಾಯಗೊಂಡಿರುವುದಾಗಿ ನನಗೆ ತಿಳಿಯಿತು.
ಗಾಯ ತೀವ್ರ ಸ್ವರೂಪದ್ದಾಗಿದ್ದರಿಂದ ಅವರ ಸ್ಥಾನದಲ್ಲಿ ನಾನು ಆಡಿದೆ.
ಹೊಸ ಚೆಂಡಿನ ವಿರುದ್ಧವಾಗಿ ಬ್ಯಾಟ್ ಬೀಸಲು ಸ್ವಲ್ಪ ಕಷ್ಟವಾಗಿತ್ತು.
ಆದ್ರೆ ನಾನು ಸ್ಪಿನ್ನರ್ ಗಳನ್ನು ಟಾರ್ಗೆಟ್ ಮಾಡಿದೆ. ಭಾರತದಲ್ಲಿ ಈ ಸ್ಕೋರ್ ದಾಖಲಿಸಿದ್ದು, ಖುಷಿ ತಂದಿದೆ ಎಂದಿದ್ದಾರೆ.