Ind-vs-Sa | ಇಂಡೋ – ಆಫ್ರಿಕಾ ಟಿ 20 ಸರಣಿ : ಪಂದ್ಯಕ್ಕೆ ಮಳೆ ಅಡ್ಡಿ
ಗುವಾಹಟಿ : ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ 20 ಪಂದ್ಯ ನಡೆಯಲಿದೆ.
ಪಂದ್ಯದ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್ ಆಗಿದೆ, ಆದ್ರೆ ಇಂದಿನ ಪಂದ್ಯಕ್ಕೆ ಮಳೆ ಅಡಚಣೆಯಾಗುವ ಸಾಧ್ಯತೆಗಳಿವೆ.
ಕೇರಳದ ತಿರುವನಂತಪುರಂನಲ್ಲಿ ನಡೆದ ಮೊದಲ ಟಿ 20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತ್ತು.
ಹೀಗಾಗಿ ಇಂದಿನ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಪ್ಲಾನ್ ನಲ್ಲಿ ಟೀಂ ಇಂಡಿಯಾ ಇದೆ.

ಆದ್ರೆ ಇಂದಿನ ಪಂದ್ಯಕ್ಕೆ ವರುಣನ ಕಾಟ ಎದುರಾಗುವ ಸಾಧ್ಯತೆಗಳಿವೆ.
ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಮಳೆಯಾಗುತ್ತಿದ್ದು, ಇಂದು ಕೂಡ ಮಳೆ ಸುರಿಯುವ ಸೂಚನೆ ಇದೆ.
ಅಂದಹಾಗೆ ಇಂದಿನ ಪಂದ್ಯದ ಟಿಕೆಟ್ ಸೋಲ್ಡ್ ಔಟ್ ಆಗಿದೆ. 39,000 ಪ್ರೇಕ್ಷಕರು ವೀಕ್ಷಿಸಬಹುದಾದ ಸಾಮರ್ಥ್ಯದ ಸ್ಟೇಡಿಯಂ ಭರ್ತಿಯಾಗಿದೆ.