ind-vs-sa-t20-odi-series – ಇಂಡೋ – ಆಫ್ರಿಕಾ ಸರಣಿಯ ವೇಳಾಪಟ್ಟಿ
ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಯನ್ನು ಕೈ ವಶ ಮಾಡಿಕೊಂಡಿರುವ ಟೀಂ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಬೇಟೆಗೆ ರೆಡಿಯಾಗಿದೆ.
ಸೆಪ್ಟೆಂಬರ್ 28 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿ ಆರಂಭವಾಗಲಿದೆ. ಈಗಾಗಲೇ ದಕ್ಷಿಣ ಆಫ್ರಿಕಾದ ಆಟಗಾರರು ಭಾರತಕ್ಕೆ ಬಂದಿದ್ದಾರೆ.
ಮೂರು ಟಿ 20, ಮೂರು ಏಕದಿನ ಪಂದ್ಯಗಳ ಸರಣಿಗಾಗಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಬಂದಿದೆ. ಈ ವರ್ಷದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಸರಣಿ ಇದಾಗಿದೆ.
ಜನವರಿಯಲ್ಲಿ ಭಾರತ ದಕ್ಷಿಣಾಫ್ರಿಕಾ ಪ್ರವಾಸ ಕೈಗೊಂಡಿತ್ತು. ಜೂನ್ ನಲ್ಲಿ ಆಫ್ರಿಕಾ ತಂಡ ಭಾರತ ಪ್ರವಾಸ ಮಾಡಿತ್ತು.

ಇಂಡೋ – ಆಫ್ರಿಕಾ ಸರಣಿ ಶೆಡ್ಯೂಲ್ ಹೀಗಿದೆ.
ಮೊದಲ ಟಿ 20 ಪಂದ್ಯ : ಸೆಪ್ಟೆಂಬರ್ 28 – ಬುಧವಾರ- ತಿರುವನಂತಪುರಂ
ಎರಡನೇ ಟಿ 20 ಪಂದ್ಯ : ಅಕ್ಟೋಬರ್ 2 – ಗುವಾಹಾಟಿ
ಮೂರನೇ ಟಿ 20 ಪಂದ್ಯ ; ಅಕ್ಟೋಬರ್ 4 – ಇಂದೋರ್
ಏಕದಿನ ಸರಣಿ ವೇಳಾಪಟ್ಟಿ
ಮೊದಲ ಏಕದಿನ ಪಂದ್ಯ ; ಅಕ್ಟೋಬರ್ 6, ಲಕ್ನೋ
2ನೇ ಏಕದಿನ ಪಂದ್ಯ : ಅಕ್ಟೋಬರ್ 9. ರಾಂಚಿ
3ನೇ ಏಕದಿನ ಪಂದ್ಯ : ಅಕ್ಟೋಬರ್ 11 – ಡೆಲ್ಲಿ
ಟಿ 20 ಸರಣಿಗಾಗಿ ಭಾರತ ಕ್ರಿಕೆಟ್ ತಂಡ
ರೋಹಿತ್ ಶರ್ಮಾ, ಕೆ.ಎಲ್.ರಾಹುಲ್. ವಿರಾಟ್ ಕೊಹ್ಲಿ, ಸೂರ್ಯ ಕುಮಾರ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಅಶ್ವಿನ್, ಚಹಾಲ್, ಅಕ್ಷರ್ ಪಟೇಲ್, ಅರ್ಷ್ ದೀಪ್ ಸಿಂಗ್, ಮೊಹ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ ಪ್ರಿತ್ ಬುಮ್ರಾ.








