IND vs SA Test Match : 198ಕ್ಕೆ ಟೀಂ ಇಂಡಿಯಾ ಆಲೌಟ್, ಆಫ್ರಿಕಾಗೆ 211 ರನ್ ಗುರಿ

1 min read
RISHAB PANT TEAM INDIA SAAKSHATV

IND vs SA Test Match : 198ಕ್ಕೆ ಟೀಂ ಇಂಡಿಯಾ ಆಲೌಟ್, ಆಫ್ರಿಕಾಗೆ 211 ರನ್ ಗುರಿ

ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 198 ರನ್ ಗಳಿಗೆ ಸರ್ವಪತನಗೊಂಡಿದೆ. ಇದರೊಂದಿಗೆ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 211 ರನ್ ಗಳ ಗುರಿ ನೀಡಿದೆ. ಭಾರತದ ದ್ವಿತೀಯ ಇನ್ನಿಂಗ್ಸ್ ನಲ್ಲಿ ರಿಷಬ್ ಪಂತ್ ಸೆಂಚೂರಿ ಸಿಡಿಸಿ ಮಿಂಚಿದರು. ನಾಯಕ ವಿರಾಟ್ ಕೊಹ್ಲಿ, 29 ರನ್, ರಾಹುಲ್ 10 ರನ್, ಅಗರ್ ವಾಲ್ 7, ಚೇತೇಶ್ವರ್ ಪೂಜಾರ 9 ರನ್, ಅಶ್ವಿನ್ 7, ಠಾಕೂರ್ 5, ರಹಾನೆ 1, ಬುಮ್ರಾ 2 ರನ್ ಗಳಿಸಿದರು. ಇದರೊಂದಿಗೆ ಟೀಂ ಇಂಡಿಯಾ 198 ರನ್ ಗಳಿಗೆ ಆಲೌಟ್ ಆಗಿದೆ.

 ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್  133 ಎಸೆತಗಳಲ್ಲಿ ಶತಕದ ಸಂಭ್ರಮ ಆಚರಿಸಿದ್ದಾರೆ. ಭಾರತದ ದ್ವಿತೀಯ ಇನ್ನಿಂಗ್ಸ್ ನಲ್ಲಿ 133 ಎಸೆತಗಳನ್ನು ಎದುರಿಸಿದ ಪಂತ್ 6 ಬೌಂಡರಿ, 4 ಸಿಕ್ಸರ್ ನೆರವಿನೊಂದಿಗೆ 100 ರನ್ ಗಳಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಪಂತ್ ಸಿಡಿಸಿದ ನಾಲ್ಕನೇ ಶತಕವಾಗಿದೆ. ಹಾಗೇ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಶತಕವೂ ಹೌದು..!

ind-vs-sa-test-match-India lead by 211 runs saaksha tv

70 ರನ್ ಗಳ ಮುನ್ನಡೆಯೊಂದಿಗೆ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ದಕ್ಷಿಣ ಆಫ್ರಿಕಾ ಬೌಲರ್ ಗಳು ಶಾಕ್ ನೀಡಿದರು. 9 ರನ್ ಗಳಿಸಿದ್ದ ಚೇತೇಶ್ವರ್ ಪೂಜಾರ ಬಂದ ದಾರಿಯಲ್ಲಿಯೇ ವಾಪಸ್ ಆದರು. ಇದಾದ ಬಳಿಕ ಬಂದ ಅಜಿಂಕ್ಯಾ ರಹಾನೆ ಕೂಡ ವಿರಾಟ್ ಜೊತೆ ನಿಲ್ಲಲಿಲ್ಲ. ಕೇವಲ 1 ರನ್ ಗಳಿಸಿ ಪೇವಿಲಿಯನ್ ಸೇರಿಕೊಂಡರು.

ಈ ಹಂತದಲ್ಲಿ ವಿರಾಟ್ ಕೊಹ್ಲಿ ಜೊತೆಗೂಡಿದ ರಿಷಬ್ ಪಂತ್, ನಾಯಕನ ಮಾರ್ಗದರ್ಶನದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಒಂದು ಕಡೆ ವಿರಾಟ್ ದಕ್ಷಿಣ ಆಫ್ರಿಕಾ ಬೌಲರ್ ಗಳ ತಾಳ್ಮೆ ಪರೀಕ್ಷೆ ಮಾಡುತ್ತಿದ್ದರೇ ರಿಷಬ್ ಪಂತ್, ಬೌಲರ್ ಗಳನ್ನು ಬೌಂಡರಿಗಳ ಮೂಲಕ ದಂಡಿಸಿರು. ಊಟದ ವಿರಾಮದ ಬಳಿಕ ವಿರಾಟ್ ಕೊಹ್ಲಿ 29 ರನ್ ಗಳಿಸಿ ಔಟ್ ಆದರು.

ಇಲ್ಲಿಂದ ಭಾರತೀಯ ಬ್ಯಾಟರ್ ಗಳ ಪೆವಿಲಿಯನ್ ಪರೇಡ್ ಆರಂಭವಾಯಿತು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಜಗ್ಗದೇ 75ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಪಂತ್ ಟೆಸ್ಟ್ ನಲ್ಲಿ ನಾಲ್ಕನೇ ಶತಕ ಸಿಡಿಸಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd