IND vs SA | ಹಾರ್ದಿಕ್ ವಿಕೆಟ್ ಪಡೆದ ಪಾರ್ನೆಲ್ ರಿಯಾಕ್ಷನ್ ಹೇಗಿತ್ತು..?
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಿರಾಸೆ ಮೂಡಿಸಿದ್ದಾರೆ.
ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಪಾಂಡ್ಯ ಕಟಕ್ ಪಂದ್ಯದಲ್ಲಿ ಆ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಕೇವಲ 9 ರನ್ ಗಳಿಸಿದ್ದ ಹಾರ್ದಿಕ್, ಆಫ್ರಿಕನ್ ಬೌಲರ್ ಪಾರ್ನೆಲ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಎಸೆತಕ್ಕೂ ಮುನ್ನಾ ಹಾರ್ದಿಕ್ ಪಾಂಡ್ಯ ಬೌಂಡರಿ ಬಾರಿಸಿದ್ದರು.
ಹೀಗಾಗಿ ಹಾರ್ದಿಕ್ ಕ್ಲೀನ್ ಬೌಲ್ಡ್ ಆಗುತ್ತಿದ್ದಂತೆ ವೇಗಿ ಪಾರ್ನೆಲ್ ಡಿಫೆರೆಂಟ್ ಆಗಿ ಸಂಭ್ರಮಿಸಿದರು.
ಕೈ ಜೋಡಿಸಿ ಹಾರ್ಟ್ ಸಿಂಬಲ್ ತೋರಿಸಿ “ಪಾಂಡ್ಯಾ ನನಗೆ ನೀನು ತುಂಬಾ ಇಷ್ಟ” ಎಂಬಂತೆ ಪಾರ್ನೆಲ್ ಸಂಭ್ರಮಿಸಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತ್ತು.
ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ತಂಡ 18.2 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು.
ಈ ಗೆಲುವಿನೊಂದಿಗೆ ಸೌತ್ ಆಫ್ರಿಕನ್ ತಂಡ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆಯಿತು.