ಧನಾಧನ್ ಧವನ್.. ಶೇಕಿಂಗ್ ಶಾರೂಖ್.. ವಿಂಡೀಸ್ ಸರಣಿಗೆ ಚಾನ್ಸ್..!!
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸೋಲನುಭವಿಸಿರುವ ಟೀಮ್ ಇಂಡಿಯಾ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್ ಗಳ ಸರಣಿಗೆ ಸಿದ್ಧವಾಗುತ್ತಿದೆ. Ind Vs WI rishi-dhawan-shahrukh-khan saaksha tv
ಮೂರು ODI ಮತ್ತು ಮೂರು T20 ಪಂದ್ಯಗಳ ಸರಣಿಗಾಗಿ ವೆಸ್ಟ್ ಇಂಡೀಸ್ ಭಾರತಕ್ಕೆ ಬರಲಿದೆ. ಸದ್ಯ ಗಾಯದಿಂದ ಚೇತರಿಸಿಕೊಂಡಿರುವ ರೋಹಿತ್ ಶರ್ಮಾ, ತಂಡಕ್ಕೆ ವಾಪಸ್ ಆಗುವುದು ಪಕ್ಕಾ ಆಗಿದೆ. ಇದರೊಂದ ಜೊತೆಗೆ ದೇಶಿ ಟೂರ್ನಿಗಳಲ್ಲಿ ಮಿಂಚು ಹರಿಸಿರುವ ಆಟಗಾರರಿಗೆ ವಿಂಡೀಸ್ ಸರಣಿಯಲ್ಲಿ ಚಾನ್ಸ್ ನೀಡುವ ಸಾಧ್ಯತೆಗಳಿವೆ. ತವರಿನಲ್ಲಿ ಸರಣಿ ನಡೆಯುವ ಕಾರಣದಿಂದಾಗಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಲು ಬಿಸಿಸಿಐ ಮುಂದಾಗಿದ್ದು, ಈ ಪೈಕಿ ಆಲ್ ರೌಂಡರ್ ರಿಷಿ ಧವನ್ ಮತ್ತು ಶಾರುಖ್ ಖಾನ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶ ತಂಡದ ನಾಯಕರಾಗಿ ರಿಷಿ ಧವನ್ ಅದ್ಭುತವಾಗಿ ಮಿಂಚು ಹರಿಸಿದ್ದರು. ರಿಷಿ ಧವನ್ ವಿಜಯ್ ಹಜಾರೆ ಪಂದ್ಯಾವಳಿಯಲ್ಲಿ ಒಟ್ಟು 458 ರನ್ ಮತ್ತು 17 ವಿಕೆಟ್‌ಗಳನ್ನು ಕಬಳಿಸಿದ್ದರು. ಆಟಗಾರನಾಗಿ .. ನಾಯಕನಾಗಿ ಹಿಮಾಚಲ ಪ್ರದೇಶವನ್ನು ಮೊದಲ ಬಾರಿಗೆ ಈ ಮೆಗಾ ಈವೆಂಟ್‌ನಲ್ಲಿ ವಿಜೇತರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಪ್ರದರ್ಶನವನ್ನು ಪರಿಗಣಿಸಿ ಬಿಸಿಸಿಐ ರಿಷಿ ಧವನ್ ಅವರಿಗೆ ವಿಂಡೀಸ್ ಗೆ ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಮತ್ತೊಂದೆಡೆ… ತಮಿಳುನಾಡು ಆಟಗಾರ ಶಾರುಖ್ ಖಾನ್ ದೇಶಿಯ ಟಿ20 ಟೂರ್ನಿ ಸೈಯದ್ ಮುಸ್ತಾಕ್ ಅಲಿ ಟ್ರೋಫಿ, ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಅದರಲ್ಲೂ ಸೈಯದ್ ಮುಸ್ತಾಕ್ ಅಲಿ ಟ್ರೋಫಿ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಮಿಳುನಾಡು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಆ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಹೀಗಾಗಿ ಶಾರೂಖ್ ಖಾನ್ ಗೂ ವಿಂಡೀಸ್ ಸರಣಿಯಲ್ಲಿ ಅವಕಾಶ ಸಿಗುವ ಸಾಧ್ಯತೆಗಳಿವೆ ಎನ್ನುತ್ತಿವೆ ಬಿಸಿಸಿಐ ಮೂಲಗಳು.