Ind Vs Zim ODI 2022 : ಭಾರತದ ಜಿಂಬಾಬ್ವೆ ಪ್ರವಾಸ – ಸಂಪೂರ್ಣ ಶೆಡ್ಯೂಲ್ ಇಲ್ಲಿದೆ
ಟೀಂ ಇಂಡಿಯಾ ಸದ್ಯ ಜಿಂಬಾಬ್ವೆ ಪ್ರವಾಸದಲ್ಲಿದೆ. ಈಗಾಗಲೇ ಕೆ.ಎಲ್.ರಾಹುಲ್ ಸೇನೆ ಜಿಂಬಾಬ್ವೆ ಸೇರಿದ್ದು, ಅಲ್ಲಿ ಮೂರು ಪಂದ್ಯ ಏಕದಿನ ಸರಣಿಯನ್ನು ಆಡಲಿದೆ.
ಈ ಸರಣಿಯಲ್ಲಿ ಟೀಂ ಇಂಡಿಯಾಗೆ ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನವಿದೆ. ಏಷ್ಯಾಕಪ್ ಕಾರಣವಾಗಿ ಈ ಸರಣಿಯಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಹಿರಿಯ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗಿದೆ.
ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮೊದಲು ಶಿಖರ್ ಧವನ್ ನಡೆಸಲಿದ್ದರು. ಆದ್ರೆ ಕೆ.ಎಲ್.ರಾಹುಲ್ ಫಿಟ್ ಆದ ಕಾರಣ ಅವರಿಗೆ ನಾಯಕತ್ವ ನೀಡಲಾಗಿದೆ.
ಶಿಖರ್ ಧವನ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ಇತ್ತ ಗಾಯದ ಸಮಸ್ಯೆಯಿಂದಾಗಿ ಆಲ್ ರೌಂಡರ್ ವಾಷಿಂಗ್ ಟನ್ ಸುಂದರ್ ಸರಣಿಯಿಂದ ದೂರವಾಗಿದ್ದು, ಶಬಾಜ್ ಅಹ್ಮದ್ ತಂಡ ಸೇರಿಕೊಂಡಿದ್ದಾರೆ.
ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸದ ಹಿನ್ನೆಲೆಯಲ್ಲಿ ಸಂಪೂರ್ಣ ವೇಳಾಪಟ್ಟಿ, ಪಂದ್ಯದ ಪ್ರಸಾರ ಸಮಯ, ಸ್ಥಳ, ಉಭಯ ತಂಡಗಳ ವಿವರ.
ಜಿಂಬಾಬ್ವೆ vs ಭಾರತ ODI ಸರಣಿ – ಮೂರು ಪಂದ್ಯಗಳು
►ಮೊದಲ ODI- ಆಗಸ್ಟ್ 18- ಗುರುವಾರ- ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
►ಎರಡನೇ ODI – ಆಗಸ್ಟ್ 20 – ಶನಿವಾರ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
►ಮೂರನೇ ODI- ಆಗಸ್ಟ್ 22- ಸೋಮವಾರ- ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ತಂಡ:
►ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಶ್ವೇಶ್ ಖಾನ್, ಪ್ರಸಿದ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.
ಜಿಂಬಾಬ್ವೆ ತಂಡ:
ರೆಗಿಸ್ ಚಕಬ್ವಾ (ನಾಯಕ), ತನಕಾ ಚಿವಾಂಗಾ, ಬ್ರಾಡ್ಲಿ ಇವಾನ್ಸ್, ಲ್ಯೂಕ್ ಜೊಂಗ್ವೆ, ರಿಯಾನ್ ಬರ್ಲ್, ಇನೊಸೆಂಟ್ ಕೈಯಾ, ಕೈಟಾನೊ ತಕುಡ್ಜ್ವಾನಾಶೆ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ, ಜಾನ್ ಮಸಾರಾ, ಟೋನಿ ಮುನ್ಯೊಂಗಾ, ರಿಚರ್ಡ್ ರಾನಿ ನ್ಗರ್ವಾ, ಸಿಕಂದರ್ ತೋನಿ ಗರ್ವಾ, ಎಂ. ವಿಕ್ಟರ್ ನೌಚಿ.