Independence day | ಚಾಮರಾಜನಗರದಲ್ಲಿ ವಿ.ಸೋಮಣ್ಣ ಧ್ವಜಾರೋಹಣ
ಚಾಮರಾಜನಗರ : 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಗರದ ಡಾ: ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಾಯ೯ಕ್ರಮದಲ್ಲಿ ಸನ್ಮಾನ್ಯ ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಶ್ರೀ ವಿ.ಸೋಮಣ್ಣ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಜನಪ್ರತಿನಿಧಿಗಳು, ಅತಿಥಿ ಗಣ್ಯರು, ಮಾಧ್ಯಮ ಮಿತ್ರರು, ಹಾಗೂ ಅಧಿಕಾರಿಗಳು ಸೇರಿದಂತೆ ನೆರೆದಿದ್ದ ಸವ೯ರಿಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಯಗಳನ್ನು ಕೋರಿದರು.
ಸವಾಲುಗಳ ನಡುವೆಯೂ ರಾಜ್ಯದ ಸವಾ೯೦ಗೀಣ ಅಭಿವೃದ್ಧಿಗೆ ಸಕಾ೯ರ ದೃಡ ಸಂಕಲ್ಪ ಮಾಡಿದ್ದು, ಸನ್ಮಾನ್ಯ ಮುಖ್ಯಮಂತ್ರಿಗಳು ಸಮಗ್ರ ಕನಾ೯ಟಕಕ್ಕೆ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ ಸಂಪಕ೯.ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಜೊತೆಗೆ ರೈತರು, ವೃದ್ಧರು ಮತ್ತು ದುಬ೯ಲರ ಏಳಿಗೆಗೆ ಒತ್ತು ನೀಡುತ್ತಿವುದನ್ನು ಉಲ್ಲೇಖಿಸಿ ಸಕಾ೯ರವು ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಕೈಗೊಂಡಿರುವ ಸಂಕ್ಷಿಪ್ತ ಮಾಹಿತಿಯನ್ನು ಸಂದೇಶದಲ್ಲಿ ನೀಡಿದರು.
ದೇಶದ ಸವ೯ತೋಮುಖ ಪ್ರಗತಿಯಲ್ಲಿ ಭಾಗಿಯಾಗಿರುವ ನಾವೆಲ್ಲರೂ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಸದಾ೯ರ್ ವಲ್ಲಭಭಾಯಿ ಪಟೇಲ್, ಜವಾಹರ್ ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಚಂದ್ರಶೇಖರ್ ಅಜಾದ್, ಭಗತ್ ಸಿ೦ಗ್, ಯಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದ ಲಕ್ಷೋಪಲಕ್ಷ ದೇಶಭಕ್ತರ ತ್ಯಾಗ,ಬಲಿದಾನ, ಮತ್ತು ಸಮಪ೯ಣೆಯ ಫಲವಾಗಿ ಈ ಸಂಭ್ರಮ ದೊರೆತಿದೆ ಎಂದು ಸ್ಮರಿಸಿದರು.

ಚಾಮರಾಜನಗರ ಜಿಲ್ಲೆಯೂ ಸಹ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಆದ ಕೊಡುಗೆ ನೀಡಿರುವುದನ್ನ ನೆನೆದ ಸಚಿವರು ಜಿಲ್ಲೆಯ ಅಪ್ರತಿಮ ದೇಶಭಕ್ತ ಹೋರಾಟಗಾರರಿಗೆ ಗೌರವ ಪೂರ್ವಕ ನಮನಗಳನ್ನು ಸಲ್ಲಿಸಿದರು.
ವಿಶ್ವನಾಯಕ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ದೇಶಭಕ್ತಿಯ ನಡೆಗಳು ನಮ್ಮೆಲ್ಲರಿಗೂ ಪ್ರೇರಕವಾಗಿದ್ದು , ವಿಶ್ವವೇ ಭಾರತವನ್ನು ಗುರುತಿಸುವಂತೆ ದೇಶದನ್ನು ವಿಶ್ವಗುರುವಾಗಿಸಿದ ಅವರ ಹೆಜ್ಜೆಗಳನ್ನು ನಾವು ಅನುಸರಿಸಿ , ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಭವ್ಯ ಭಾರತದ ಅಖಂಡತೆಯನ್ನು ಸಾರಲು ಮನೆ ಮನೆಗಳಲ್ಲಿ ಕ್ರಿವರ್ಣ ಧ್ವಜ ರಾರಾಜಿಸುವಂತೆ ನೀಡಿದ ಹರ್ ಘರ್ ತಿರಂಗಾ ಕರೆಗೆ ಇಡೀ ದೇಶ ಸ್ಪಂದಿಸಿರುವ ರೀತಿ ಅದ್ವಿತೀಯವಾದುದು ಎಂದರು.
ಮುಂದುವರಿದು ಮಾತನಾಡಿದ ಸಚಿವರು ಚಾಮರಾಜನಗರ ಜಿಲ್ಲೆಯ ಎಲ್ಲಾ ಕೆರೆ–ಕಟ್ಟೆಗಳಿಗೆ ನೀರು ತುಂಬಿಸುವ ಸಂಬಂಧ DPR ಸಿದ್ದಪಡಿಸಲಾಗುತ್ತಿದ್ದು ಜಿಲ್ಲೆಯ ರೈತರ ಬದುಕನ್ನು ಹಸನುಗೊಳಿಸಲು ಸಕಾ೯ರ ಬದ್ದವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮರಾಜನಗರ ವಿ.ಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿ.ಪುಟ್ಟರಂಗಶೆಟ್ಟಿಯವರು ವಹಿಸಿದ್ದರು.ಕಾಡಾ ಅಧ್ಯಕ್ಷ ಶ್ರೀ ನಿಜಗುಣರಾಜು, ನಗರಸಭೆ ಅಧ್ಯಕ್ಷೆ ಶ್ರೀಮತಿ ಸಿ.ಎಂ ಆಶಾ, ಉಪಾಧ್ಯಕ್ಷೆ ಶ್ರೀಮತಿ ಪಿ.ಸುಧಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಪಿ.ಬಿ.ಶಾಂತಮೂತಿ೯, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಎಸ್ಪಿ ಶ್ರೀ ಶಿವಕುಮಾರ್, ಜಿಪಂ ಸಿಇಓ ಶ್ರೀಮತಿ ಕೆ.ಎಂ ಗಾಯತ್ರಿ , ಅಪರ ಜಿಲ್ಲಾಧಿಕಾರಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.