200 ಕೋಟಿ ಲಸಿಕೆ ನೀಡಿ ಮೈಲಿಗಲ್ಲು ಸಾಧಿಸಿದ ಭಾರತ..
ಕೋವಿಡ್ ವಾಕ್ಸಿನೇಷನ್ ನಲ್ಲಿ ಭಾರತ ಹೊಸ ದಾಖಲೆ ಸೃಷ್ಟಿಸಿದೆ. ಕೋವಿಡ್ ವಾಕ್ಸಿನೇಷನ್ ಆರಂಭಿಸಿದಾಗಿನಿಂದ ಇಲ್ಲಿಯವರೆಗೆ 200 ಕೋಟಿ ಲಸಿಕೆ ನೀಡಿವ ಮೂಲಕ ಭಾರತ ಕೋವಿಡ್ ವಿರುದ್ಧ ಹೋರಾಟದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದೆ.
ಭಾರತ ಮತ್ತೆ ಇತಿಹಾಸ ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ ಮಾಡಿ ದೇಶವಾಸಿಗಳಿಗೆ ಆಭಿನಂದನೆ ಸಲ್ಲಿಸಿದ್ದಾರೆ. 200 ಕೋಟಿ ಲಸಿಕೆ ನೀಡಿದ ವಿಶೇಷ ಸಮಯದಲ್ಲಿ ಭಾಸರತದ ಲಸಿಕೆ ಅಭಿಯಾನವನ್ನ ಯಶಸ್ವಿಯಾಗಿಸಲು ಕೊಡುಗೆ ನೀಡಿದವರ ಬಗ್ಗೆ ಹೆಮ್ಮೆ ಇದೆ. ಇದು ಕರೋನಾ ವಿರುದ್ಧದ ಜಾಗತಿಕ ಹೋರಾಟವನ್ನ ಬಲಪಡಿಸುತ್ತದೆ ಎಂದು ಮೋದಿ ತಿಳಿಸಿದ್ದಾರೆ.
ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ವಯಸ್ಕ ಜನಸಂಖ್ಯೆಯಲ್ಲಿ ಶೇಕಡಾ 98 ರಷ್ಟು ಜನರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ ಮತ್ತು ಶೇಕಡಾ 90 ರಷ್ಟುಜನರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ.
ಆರೋಗ್ಯ ಇಲಾಖೆ ಹೊರಡಿಸಿದ ಮಾಹಿತಿ ಪ್ರಕಾರ 71% ಲಸಿಕೆ ಗ್ರಾಮೀಣ ಭಾಗದಲ್ಲಿ 29 % ನಗರ ಪ್ರದೇಶಗಳಲ್ಲಿ ನೀಡಲಾಗಿದೆ. ಒಟ್ಟು ಡೋಸ್ಗಳಲ್ಲಿ 48.9 % ಮಹಿಳೆಯರಿಗೆ ನೀಡಿದರೆ, 51.5 % ಪುರುಷರಿಗೆ ನೀಡಲಾಗಿದೆ.
ಕಳೆದ ವರ್ಷ ಜನವರಿ 16 ರಂದು ದೇಶವ್ಯಾಪಿ ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಾಯಿತು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಚುಚ್ಚು ಮದ್ದು ನೀಡಲಾಗಿತ್ತು. ಮುಂಚೂಣಿ ಕಾರ್ಯಕರ್ತರಿಗೆ ಕಳೆದ ವರ್ಷ ಫೆಬ್ರವರಿ 2 ರಿಂದ ಪ್ರಾರಂಭವಾಯಿತು. ನಂತರ ಜನರಿಗೆ ನೀಡಲಾಯಿತು. ಕಳೆದ ವರ್ಷ ಅಕ್ಟೋಬರ್ 21 ರಂದು 100 ಕೋಟಿ ಮತ್ತು ಈ ವರ್ಷದ ಜನವರಿ 7 ರಂದು 150 ಕೋಟಿ ದಾಟಿದ್ದ ಲಸಿಕೆ ಡೋಸ್ ಗಳ ಸಂಖ್ಯೆ ಇಂದು 200 ಕೋಟಿ ದಾಟಿದೆ.