ಇಂಡೋ ಚೀನಾ ನಡುವೆ ಮತ್ತೊಂದು ಸುತ್ತಿನ ಗಡಿ ಮಾತುಕತೆ.
ಭಾರತ ಮತ್ತು ಚೀನಾ ಗಡಿ ಸಮಸ್ಯೆಗಳ ಕುರಿತು ಇಂದು ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ. ಭಾರತ-ಚೀನಾ ಗಡಿ ವ್ಯವಹಾರಗಳ (ಡಬ್ಲ್ಯುಎಂಸಿಸಿ) ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ, ವರ್ಕಿಂಗ್ ಮೆಕ್ಯಾನಿಸಂ ಅಡಿಯಲ್ಲಿ ಮಾತುಕತೆ ನಡೆಯಲಿದೆ.
ಪೂರ್ವ ಲಡಾಖ್ನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನ ಸೈನಿಕರು ವಾಸ್ಯವ್ಯ ಹೂಡಿದ ನಂತರ ಪ್ಯಾಂಗೊಂಗ್ ಸರೋವರದ ಎರಡೂ ದಡಗಳು, ಗೊಗ್ರಾ ಶಿಖರ ಮತ್ತು ಸ್ಪ್ರಿಂಗ್ಸ್ ಪ್ರದೇಶ ಎರಡು ದೇಶಗಳ ನಡುವೆ ಘರ್ಷಣೆ ಕೇಂದ್ರಗಳಾಗಿದ್ದವು. ಅನೇಕ ಸುತ್ತಿನ ಮಾತುಕತೆಗಳ ಮೂಲಕ, ಪ್ಯಾಂಗೊಂಗ್ ತ್ಸೋ ಮತ್ತು ಗೋಗ್ರಾ ಪಾಯಿಂಟ್ ಗಳಿಂದ ಚೀನಾ ಪಡೆಗಳು ಅಲ್ಲಿಂದ ನಿರ್ಗಮಿಸಿದ್ದವು.
ಭಾರತ ಮತ್ತು ಚೀನಾ ಕಳೆದ ತಿಂಗಳು ಭಾರತ-ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯ 13 ನೇ ಸುತ್ತನ್ನು ನಡೆಸಿದ್ದವು.