ಪ್ಯಾರಿಸ್ 2024ರ ಒಲಿಂಪಿಕ್ಸ್ ನಲ್ಲಿ ಪುರುಷರ ಹಾಕಿ ತಂಡ ಭರ್ಜರಿ ಪ್ರದರ್ಶನ ತೋರುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.
ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಗ್ರೇಟ್ ಬ್ರಿಟನ್ ಮಣಿಸಿ ಭಾರತ ತಂಡವು ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ. ಸ್ಟೇಡ್ ಯ್ವೆಸ್-ಡು-ಮನೋಯಿರ್‌ನಲ್ಲಿ ಶೂಟ್-ಔಟ್ ಮೂಲಕ ಗ್ರೇಟ್ ಬ್ರಿಟನ್ ನ್ನು ಭಾರತ ಸೋಲುಣಿಸಿದೆ. ಈ ಗೆಲುವಿನ ಮೂಲಕ ಒಲಿಂಪಿಕ್ಸ್ ನಲ್ಲಿ ಸತತ ಎರಡನೇ ಪದಕಕ್ಕೆ ಭಾರತ ಒಂದು ಗೆಲುವಿನ ಅಂತರದಲ್ಲಿದೆ. ಸೆಮಿಫೈನಲ್ ನಲ್ಲಿ ಜರ್ಮನಿ ಅಥವಾ ಅರ್ಜೆಂಟೀನಾ ಭಾರತದ ಸವಾಲು ಸ್ವೀಕರಿಸುವ ಸಾಧ್ಯತೆ ಇದೆ.
ಪಂದ್ಯದ 17 ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ತನ್ನ ಏಳನೇ ಗೋಲು ಗಳಿಸಿದರು. ಆ ಮೂಲಕ ಭಾರತ ಮುನ್ನಡೆ ಸಾಧಿಸುವಂತೆ ಮಾಡಿದರು. ಇದಾದ ಐದು ನಿಮಿಷದಲ್ಲೇ ಲೀ ಮಾರ್ಟನ್ ಗ್ರೇಟ್ ಬ್ರಿಟನ್‌ಗೆ ಸಮಬಲ ಮಾಡಿದರು.
ಪೂರ್ಣಾವಧಿಯ ನಂತರ ಪಂದ್ಯ 1-1 ರಲ್ಲಿ ಕೊನೆಗೊಂಡರೆ, ಭಾರತವು ಶೂಟ್-ಔಟ್ ಅನ್ನು 4-2 ರಿಂದ ಗೆದ್ದು ಸೆಮಿಫೈನಲ್ ಗೆ ಪ್ರವೇಶಿಸಿತು.