Rohit Sharma – ಟಿ 20 ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಹೊಸ ದಾಖಲೆ
ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೆಮೀಸ್ ಗೆ ಎಂಟ್ರಿ ಕೊಟ್ಟಿದೆ.
ಭಾನುವಾರ ಮುಗಿದ ಸೂಪರ್ 12 ರ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ 71 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
ನವೆಂಬರ್ 10 ರಂದು ಇಂಗ್ಲೆಂಡ್ ವಿರುದ್ಧ ಸೆಮೀಫೈನಲ್ ನಲ್ಲಿ ಟೀಂ ಇಂಡಿಯಾ ಮುಖಾಮುಖಿಯಾಗಲಿದೆ.
ಈ ಸಂಗತಿಯನ್ನ ಪಕ್ಕಕ್ಕೆ ಇಟ್ಟರೇ ಟೀಂ ಇಂಡಿಯಾ ನಾಯಕರಾಗಿ ರೋಹಿತ್ ಶರ್ಮಾ ಅಪರೂಪದ ಸಾಧನೆ ಮಾಡಿದ್ದಾರೆ.
ಜಿಂಬಾಬ್ವೆ ವಿರುದ್ಧ ಗೆಲುವು ಈ ವರ್ಷದಲ್ಲಿ ಟಿ 20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ನಾಯಕರಾಗಿ ರೋಹಿತ್ ಶರ್ಮಾಗೆ 21ನೇ ಗೆಲುವು.
ಈ ಹಿನ್ನಲೆಯಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ 20 ಗೆಲುವು ಗಳನ್ನು ಸಾಧಿಸಿದ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ.
2021ರಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ 20 ಗೆಲುವುಗಳನ್ನು ಪಡೆದುಕೊಂಡಿದ್ದರು.
ಇದೀಗ ಈ ದಾಖಲೆಯನ್ನು ರೋಹಿತ್ ಶರ್ಮಾ ಬ್ರೇಕ್ ಮಾಡಿದ್ದಾರೆ. 2018ರಲ್ಲಿ ಪಾಕ್ ಮಾಜಿ ನಾಯಕ ಸರ್ಪರಾಜ್ ಅಹ್ಮದ್ 18 ಟಿ 20 ಪಂದ್ಯಗಳನ್ನು ಗೆದ್ದಿದ್ದು, 2016ರಲ್ಲಿ ಎಂಎಸ್ ಧೋನಿ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು.
ಇದಲ್ಲದೇ ಟೀಂ ಇಂಡಿಯಾ ಈ ವರ್ಷ 50ಕ್ಕೂ ಹೆಚ್ಚು ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು 10 ನೇ ಬಾರಿ.
ಇದೇ ವರ್ಷ ಆರು ಬಾರಿ 50ಕ್ಕೂ ಹೆಚ್ಚು ರನ್ ಗಳ ಅಂತರದಲ್ಲಿ ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸಿದೆ.
ಒಟ್ಟಾರೆಯಾಗಿ ಆಟಗಾರನಾಗಿ ರೋಹಿತ್ ಶರ್ಮಾಗೆ ಇದು 100ನೇ ಟಿ 20 ಗೆಲುವು.