ಬುಚಾದ ನರಮೇಧವನ್ನು ಖಂಡಿಸಿದ ಭಾರತ
ಕೀವ್: ರಷ್ಯಾ-ಉಕ್ರೇನ್ ಯುದ್ಧ ನಡೆದು ಒಂದೂವರೆ ತಿಂಗಳು ಕಳೆದಿವೆ. ಈ ಮಧ್ಯೆ ರಷ್ಯಾ ಉಕ್ರೇನ್ ಬುಚಾ ಪಟ್ಟಣದಲ್ಲಿ ನಡೆಸಿದ ನಾಗರಿಕ ನರಮೇಧಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಭದ್ರತಾಮಂಡಳಿಯಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ತಿರುಮೂರ್ತಿ ಉಕ್ರೇನ್ ನಲ್ಲಿನ ಪರೀಸ್ಥಿತಿ ಹದಗೆಟ್ಟಿದೆ, ಅಲ್ಲದೇ ಸುದಾರಿಸುತ್ತಿಲ್ಲ. ಇದರ ಜೊತೆಗೆ ಬುಚಾವನಲ್ಲಿ ನಡೆದ ಹತ್ಯಾಕಾಂಡವನ್ನು ತೀರ್ವವಾಗಿ ವಿರೋಧಿಸುತ್ತೇವೆ. ಇದರಿಂದ ಕಳವಳ ಉಂಟಾಗಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೇ ಈ ಕುರಿತು ಸಂಸತ್‍ನಲ್ಲಿ ಮಾತಾಡಿದ ವಿದೇಶಾಂಗ ಮಂತ್ರಿ ಜೈಶಂಕರ್ ಅವರು, ಬುಚಾ ನರಮೇಧ ದಾರುಣವಾಗಿದೆ, ಭಾರತ ಶಾಂತಿ ಬಯಸುತ್ತದೆ ಎಂದು ಹೇಳಿದ್ದಾರೆ.
ಹಾಗೇ ಬುಚಾ ನರಮೇಧ ಖಂಡಿಸಿರುವ ಅಮೆರಿಕಾ, ರಷ್ಯಾದಲ್ಲಿ ಹೊಸ ಹೂಡಿಕೆಗಳ ಮೇಲೆ, ರಷ್ಯಾದ ಆರ್ಥಿಕ ಸಂಸ್ಥೆಗಳ ಮೇಲೆ, ಪುಟಿನ್‍ರ ಇಬ್ಬರು ಪುತ್ರಿಯರ ಮೇಲೆ, ಕ್ರೆಮ್ಲಿನ್ ಉನ್ನತಾಧಿಕಾರಿಗಳ ಮೇಲೆ, ಅವರ ಕುಟುಂಬಸ್ಥರ ಮೇಲೆ ಹೆಚ್ಚುವರಿ ದಿಗ್ಬಂಧನ ವಿಧಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುಟಿನ್, ಇದೆಲ್ಲಾ ಸ್ವಾತಂತ್ರ್ಯಕ್ಕಾಗಿ ರಷ್ಯಾ ತೆರುತ್ತಿರುವ ಬೆಲೆ ಎಂದಿದ್ದಾರೆ. ಪೋಪ್ ಫ್ರಾನ್ಸೀಸ್ ಕೂಡ ಬುಚಾ ನರಮೇಧವನ್ನು ಖಂಡಿಸಿದ್ದಾರೆ. ತಾವು ಮುತ್ತಿಕ್ಕಿದ ಉಕ್ರೇನ್ ಧ್ವಜವನ್ನು ಬುಚಾ ನಗರಕ್ಕೆ ಕಳಿಸಿಕೊಟ್ಟಿದ್ದಾರೆ.








