ಎಚ್ಚರ,,,! ಮುಂದಿನ ತಿಂಗಳು ಸಕ್ರಿಯ ಪ್ರಕರಣಗಳ ಸಂಖ್ಯೆ 38-48 ಲಕ್ಷಕ್ಕೇರುವ ಸಾಧ್ಯತೆ..!
ನವದೆಹಲಿ : ದೇಶದಲ್ಲಿ ಈಗಾಗಲೇ ಕೊರೊನಾ ರಣಕೇಕೆಗೆ ಜನ ಬೆಚ್ಚಿಬಿದ್ದಿದ್ದಾರೆ. ಈ ನಡುವೆ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಮುಂದಿನ ತಿಂಗಳ ಮಧ್ಯಭಾಗದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಪೀಕ್ ಲೆವೆಲ್ ತಲುಪಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಮೇ 14ರಿಂದ 18ರ ನಡುವಿನ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 38-48 ಲಕ್ಷಕ್ಕೇರಬಹುದು ಮತ್ತು ಮೇ 4ರಿಂದ 8ರ ಬಳಿಕ ದೇಶದಲ್ಲಿ ದೈನಂದಿನ ಹೊಸ ಸೋಂಕು ಪ್ರಕರಣಗಳ ಸಂಖ್ಯೆಯು 4.4 ಲಕ್ಷವನ್ನು ತಲುಪಬಹುದು ಎಂದು ಐಐಟಿ ಕಾನ್ಪುರ ಮತ್ತು ಹೈದರಾಬಾದ್ಗಳ ವಿಜ್ಞಾನಿಗಳು ಹೇಳಿದ್ದಾರೆ.
ಮೇ ಮಧ್ಯಭಾಗದ ವೇಳೆಗೆ ಹತ್ತು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಸೇರ್ಪಡೆಗೊಳ್ಳಲಿವೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ನೂತನ ಅಂದಾಜನ್ನು ಐಐಟಿ ಕಾನ್ಪುರದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರೊ.ಮಣಿಂದರ್ ಅಗರವಾಲ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.