ಭಾರತದಲ್ಲಿ 2.38 ಲಕ್ಷ ಕೊರೊನಾ ಕೇಸ್ …
ಭಾರತದಲ್ಲಿ ನಿನ್ನೆ ಹೊಸದಾಗಿ 2.38 ಲಕ್ಷ ಕೊರೊನಾ ಕೇಸ್ ಪತ್ತೆಯಾಗಿದೆ. 310 ಜನ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 17,36,628 ಕ್ಕೆ ಏರಿದೆ. 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಓಮಿಕ್ರಾನ್ 8,891 ಪ್ರಕರಣಗಳು ಪತ್ತೆಯಾಗಿದೆ.. ಸೋಮವಾರದಿಂದ ಓಮಿಕ್ರಾನ್ ಪ್ರಕರಣಗಳಲ್ಲಿ 8.31% ಹೆಚ್ಚಳವಾಗಿದೆ..
ನಿಷೇಧದ ನಡುವೆಯೂ ಜಾತ್ರೆ
ಬಾಗಲಕೋಟೆ : ಉತ್ತರ ಕರ್ನಾಟಕ ಧಾರ್ಮಿಕ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಾಲಯದ ಜಾತ್ರಾ ಮಹೋತ್ಸವವನ್ನು ಕೊರೊನಾ ನಿಷೇಧಾಜ್ಞೆಯ ನಡುವೆಯು ಅದ್ಧೂರಿಯಾಗಿ ನೆರವೇರಿಸಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ಕಂಡುಬಂದಿದೆ.. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಥ ಎಳೆಯುವ ಸಮಯದಲ್ಲಿ ನೆರೆದರು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು.
ಮಸೀದಿ ಕೆಡವುವಂತೆ ವಿಡಿಯೋ ಮಾಡಿದ ಕಾಳಿ ಸ್ವಾಮೀಜಿ ಅರೆಸ್ಟ್
ಮಂಡ್ಯ: ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವುವಂತೆ ವಿವಾದಾತ್ಮಕ ಹೇಳಿಕೆ ನೀಡಿ ವಿಡಿಯೋ ಬಿಡುಗಡೆ ಮಾಡಿದ ಕಾಳಿ ಸ್ವಾಮೀಜಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಿನ್ನೆ ರಿಷಿ ಕುಮಾರ್ ಸ್ವಾಮೀಜಿ ಮಸೀದಿ ಮುಂದೆ ನಿಂತು ಹಿಂದೂಗಳಿಗೆ ಕರೆ ನೀಡಿದ್ದರು. ಶ್ರೀರಂಗಪಟ್ಟಣದ ದೇವಾಲಯವನ್ನು ಕೆಡವಿ ಮಸೀದಿ ಮಾಡಿದ್ದಾರೆ. ಇದು ಮೊದಲು ದೇವಾಲಯವಿತ್ತು. ಇದನ್ನು ಕೆಡವಿದ್ದಾರೆ ಹಿಂದೂಗಳು ಅತಿ ಬೇಗ ಜಾಗೃತರಾಗಿ ಒಡೆಯಬೇಕಾದ ಮಸೀದಿಯಲ್ಲಿ ಇದೂ ಒಂದು. ಇದನ್ನು ಆದಷ್ಟು ಬೇಗ ಬಾಬ್ರಿ ಮಸೀದಿ ರೀತಿಯಲ್ಲಿ ಕೆಡವಬೇಕೆಂದು ರಿಷಿ ಕುಮಾರ್ ಸ್ವಾಮೀಜಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
ಗಣರಾಜ್ಯೋತ್ಸದಂದು ದಾಳಿ ಎಚ್ಚರಿಕೆ
ಗಣರಾಜ್ಯೋತ್ಸವ ಪರೇಡ್ ವೇಳೆ ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಯಬಹುದು ಎಂದು ಐಬಿ ಮಂಗಳವಾರ ಎಚ್ಚರಿಕೆ ನೀಡಿದೆ. ಉಗ್ರರು, ಜನರ ಗುಂಪನ್ನ ಗುರಿಯಾಗಿಸಿ ದಾಳಿ ಮಾಡಬಹುದು ಎಂದು ತಿಳಿಸಿದೆ. ಗುಪ್ತಚರ ಇಲಾಖೆ, ನಿಷೇಧಿತ ಸಂಘಟನೆ ಖಲಿಸ್ತಾನಿ ಲಿಬರೇಶನ್ ಫೋರ್ಸ್ ಹೆಸರು ತೆಗೆದುಕೊಂಡಿದ್ದು ಈ ಸಂಘಟನೆಯು ದಾಳಿ ನಡೆಸಬಹುದು ಎಂದು ಮಾಹಿತಿ ನೀಡಿದೆ.
ಪೊಲೀಸರಿಂದಲೇ ಗಾಂಜಾ ದಂಧೆ
ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆರ್.ಟಿ.ನಗರದ ನಿವಾಸದ ಭದ್ರತೆಗೆ ನಿಯೋಜನೆ ಮಾಡಿದ್ದ ಪೇದೆಗಳಿಬ್ಬರು ಗಾಂಜಾ ದಂಧೆಗೆ ಇಳದಿದ್ದದ್ದು ಕಂಡುಬಂದಿದೆ.. ನಗರದ ಕೋರಮಂಗಲ ಠಾಣೆಯ ಸಿಬ್ಬಂದಿಗಳಾದ ಸಂತೋಷ್ ಮತ್ತು ಶಿವಕುಮಾರ್ ಪೇದೆಗಳು ಸಿಎಂ ನಿವಾಸದ ಬಳಿಯೇ, ಡ್ರಗ್ ಪೆಡ್ಲರ್ ಗಳಾದ ಅಖಿಲ್ ರಾಜ್ ಹಾಗೂ ಅಮ್ಜದ್ ಖಾನ್ ಬಳಿ ಗಾಂಜಾ ಖರೀದಿಸುತ್ತಿದ್ದರು ಎನ್ನಲಾಗಿದೆ.. ಹೊಯ್ಸಳ ಸಿಬ್ಬಂದಿ ಸಿಎಂ ಮನೆ ಬಳಿ ಗಸ್ತಿನಲ್ಲಿದ್ದ ವೇಳೆ ಅನುಮಾನದ ಮೇಲೆ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಶಮನಿಸಂ ಹೆಸರಲ್ಲಿ ನಾಪತ್ತೆಯಾಗಿದ್ದ ಬಾಲಕಿ ಗುಜರಾತ್ ನಲ್ಲಿ ಪತ್ತೆ
ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ಬಾಲಕಿಯೊಬ್ಬಳು ಕಾಣೆಯಾಯಾಗಿದ್ದಳು. ಅದ್ಯಾತ್ಮದ ಪ್ರಭಾವ, ಶಮನಿಸಂ ಎನ್ನುವ ತಂತ್ರದ ಹಿಂದೆ ಬಿದ್ದು ಕಾಣೆಯಾಗಿದ್ದಾಳೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಬಾಲಕಿ 78 ದಿನಗಳ ಬಳಿಕ ಪತ್ತೆಯಾಗಿದ್ದಾಳೆ. 2 ತಿಂಗಳ ಹಿಂದೆ ಕಾಣೆಯಾಗಿದ್ದ ಬಾಲಕಿಯನ್ನ ಪೊಲೀಸರು ಎರಡು ತಿಂಗಳ ಬಳಿಕ ಪತ್ತೆ ಹಚ್ಚಿದ್ದಾರೆ. ಗುಜರಾತ್ ನ ಸೂರತ್ ಆಶ್ರಮವೊಂದರಲ್ಲಿ ತಂಗಿದ್ದ ಬಾಲಕಿಯನ್ನ ಸುಬ್ರಮಣ್ಯಪುರ ಪೊಲೀಸರು ಪತ್ತೆ ಹಚ್ಚಿ ಮತ್ತೆ ಪೋಷಕರಿಗೆ ಒಪ್ಪಿಸಿದ್ದಾರೆ.
ಪಂಜಾಬ್ ಚುನಾವಣೆ – ಆಪ್ ಪಕ್ಷದಿಂದ ಸಿಎಂ ಅಭ್ಯರ್ಥಿ ಘೋಷಣೆ…
ಪಂಜಾಬ್ ವಿಧಾನಸಭಾ ಚುನಾವಣೆಯನ್ನ ಗಂಭಿರವಾಗಿ ಪರಿಗಣಿಸಿರುವ ಆಪ್ ಪಕ್ಷ ಭರ್ಜರಿಯಾಗಿ ತಯಾರಿ ನಡೆಸುತ್ತಿದೆ. ಸಿ ಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಚುನಾವಣೆಯನ್ನ ಎದುರಿಸಲು ಅದ್ದೂರಿ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ.
ಎಲ್ಲಾ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆ ಇಟ್ಟಿರುವ ಆಪ್ ಪಂಜಾಬ್ ಸಿ ಎಂ ಅಭ್ಯರ್ಥಿಯ ಹೆಸರನ್ನ ಘೋಷಿಸಿದೆ. ಮೊಹಾಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಪಂಜಾಬ್ ಸಿಎಂ ಅಭ್ಯರ್ಥಿಯಾಗಿ ಸಂಗ್ರೂರ್ ಕ್ಷೇತ್ರದ ಸಂಸದ ಭಗವಂತ್ ಮಾನ್ ಅವರ ಹೆಸರನ್ನ ಪ್ರಸ್ತಾಪಿಸಿದ್ದಾರೆ.
ಆಪ್ ಪಕ್ಷ ಪಂಜಾಬ್ ನ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಕುರಿತು ಪೋನ್ ಸಮೀಕ್ಷೆ ನಡೆಸಿತ್ತು. ಜನವರಿ 17 ರಂದು ವಾಟ್ಸಪ್ ಮತ್ತು ಟೆಕ್ಸ್ಟ್ ಮಸೆಜ್ ಗಳ ಮೂಲಕ ಸಿ ಎಂ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಜನತೆ ಅಭಿಪ್ರಾಯ ಹಮಚಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು.
ಅಬುದಾಬಿಯಲ್ಲಿ ಡ್ರೋನ್ ದಾಳಿ, ಇಬ್ಬರು ಭಾರತೀಯರ ಸಾವು..
ಅಬುಧಾಬಿಯಲ್ಲಿ ಯೆಮೆನ್ನ ಹೌತಿ ಬಂಡುಕೋರರು ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಎಂದು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ. ಸೋಮವಾರದ ದಾಳಿಯಲ್ಲಿ ಆರು ಜನರು ಗಾಯಗೊಂಡಿದ್ದು ಅದರಲ್ಲಿ ಇಬ್ಬರು ಭಾರತಿಯರು ಸೇರಿದ್ದಾರೆ. ವೈದ್ಯಕೀಯ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ಅಬುಧಾಬಿಯ ರಾಯಭಾರ ಕಚೇರಿ ತಿಳಿಸಿದೆ.
ಜಗನ್ ಕೊಲ್ಲುತ್ತೇನೆ ಎಂದ ಪವನ್ ಅಭಿಮಾನಿ
ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಸಿಎಂ ಜಗನ್ ಮೋಹನ್ ಅನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಮಾನವ ಬಾಂಬ್ ಆಗಿ ಜಗನ್ ಅನ್ನು ಕೊಲ್ಲುತ್ತೇನೆ ಅದು ಕೂಡ ರಾಜೀವ್ ಗಾಂಧಿ ಹತ್ಯೆಮಾದರಿಯಲ್ಲಿ ಎಂದು ಟ್ವಿಟ್ಟರ್ನಲ್ಲಿ ಹೇಳಿದ್ದಾನೆ. ಈ ಟ್ವೀಟ್ ಈಗ ಭಾರೀ ವೈರಲ್ ಆಗಿದ್ದು, ಈತನ ವಿರುದ್ಧ ತಿರುಪತಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಜಗನ್ ನೇತೃತ್ವದ ಜನಸೇನಾ ಪಕ್ಷ ಸಹ ಹಲವು ನಗರಗಳಲ್ಲಿ ಪವನ್ ಅಭಿಮಾನಿ ವಿರುದ್ಧ ದೂರು ದಾಖಲಿಸಿವೆ.
ಅಹಮದಾಬಾದ್ ಗೆ – ಹಾರ್ದಿಕ್ ರಶೀದ್ , ಶುಭ್ ಮನ್
ಐಪಿಎಲ್ 2022 ಕ್ಕೆ, ಹೊಸದಾಗಿ ಸೇರ್ಪಡೆಯಾಗಿರುವ ಎರಡು ತಂಡಗಳಲ್ಲಿ ಅಹಮದಾಬಾದ್ ಫ್ರಾಂಚೈಸಿ ಮೂವರು ಆಟಗಾರರನ್ನು ಹೊಸದಾಗಿ ಸೇರ್ಪಡಿಸಿಕೊಂಡಿದೆ. ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿರುವ ಪ್ರಕಾರ ಹಾರ್ದಿಕ್ ಪಾಂಡ್ಯ ಮತ್ತು ರಶೀದ್ ಖಾನ್ ಮತ್ತು ಶುಬ್ ಮನ್ ಗಿಲ್ ಹೊಸ ಪ್ರಾಂಚೈಸಿಗೆ ಸೆಲೆಕ್ಟ್ ಆಗಿದ್ದಾರೆ.
ಹಾರ್ದಿಕ್ ಪಾಂಡ್ಯ ಮತ್ತು ರಶೀದ್ ಖಾನ್ 15 ಕೋಟಿ ಹಾಗೂ ಶುಭ್ಮಾನ್ ಗಿಲ್ ಏಳು ಕೋಟಿ ಪಡೆಯಲಿದ್ದಾರೆ. ಪಾಂಡ್ಯ ತಂಡದ ನಾಯಕರೂ ಆಗಲಿದ್ದಾರೆ. ಜನವರಿ 22 ರ ಒಳಗಾಗಿ ಹೊಸ ಐಪಿಎಲ್ ತಂಡಗಳಾದ ಲಕ್ನೋ ಮತ್ತು ಅಹಮದಾಬಾದ್ ಮೂರು ಆಟಗಾರರನ್ನ ಉಳಿಸಿಕೊಳ್ಳಬೇಕಿದೆ.








