ಭಾರತಕ್ಕೂ ಕಾಲಿಟ್ಟಿದ್ಯಾ ಲ್ಯಾಂಬ್ಡಾ ರೂಪಾಂತರಿ ವೈರಸ್ ..?  ಏನಂತಾರೆ ತಜ್ಞರು..?

1 min read

ಭಾರತಕ್ಕೂ ಕಾಲಿಟ್ಟಿದ್ಯಾ ಲ್ಯಾಂಬ್ಡಾ ರೂಪಾಂತರಿ ವೈರಸ್ ..?  ಏನಂತಾರೆ ತಜ್ಞರು..?

ದೇಶಾದ್ಯಂತ.. ಅಲ್ಲಾ ಇಡೀ ವಿಶ್ವಾದ್ಯಂತ ಕೋವಿಡ್ ಹಾವಳಿ ಇನ್ನೇನು ಕಡಿಮೆಯಾಗುತ್ತೆ ಅಂದಾಗಲೇ ಬ್ಲಾಕ್ ಫಂಗಸ್ , ಹಳದಿ ಫಂಗಸ್ , ಹಸಿರು ಫಂಗಸ್ ಅಂತ ಆತಂಕ ಶುರುವಾಗಿತ್ತು. ಆದ್ರೆ ಇದೆಲ್ಲದ್ದನ್ನೂ ಮೀರಿ ಕೋವಿಡ್ ನ ರೂಪಾಂತರ ತಳಿ ಡೆಲ್ಟಾ ಪ್ಲಸ್ ಹೆಚ್ಚಿನ ಆತಂಕ ಸೃಷ್ಟಿ ಮಾಡಿದೆ. ಇದು ಹೆಚ್ಚು ಅಪಾಯಕಾರಿ ಎನ್ನಲಾಗಿತ್ತು. ಆದ್ರೆ ಇದಕ್ಕಿಂತಲೂ ಹೆಚ್ಚು ಅಪಾಯಕಾರಿ  ಎನ್ನಲಾಗ್ತಿರುವ ಲ್ಯಾಂಬ್ಡಾ ರೂಪಾಂತರಿ ಭಾರತದಲ್ಲಿ ಕಾಣಿಸಿಕೊಂಡಿದ್ಯಾ ಎಂಬ ಗೊಂದಲಗಳು ಆತಂಕ ಸೃಷ್ಟಿಸಿವೆ.

ಆದ್ರೆ ಈ ರೂಪಾಂತರಿ ಇದುವರೆಗೆ ಭಾರತದಲ್ಲಿ ಕಾಣಿಸಿಕೊಂಡಿಲ್ಲ ಅಂತ ಕೇಂದ್ರ ಸರ್ಕಾರಿ ಮೂಲಗಳು ತಿಳಿಸಿವೆ. ಈ ಲ್ಯಾಂಬ್ಡಾ ರೂಪಾಂತಾರಿ ಕೊರೋನಾಗೆ ಸಂಬಂಧಿಸಿದಂತೆ ಅತಿ ಹೆಚ್ಚು ಡೆತ್​ ರೇಟ್​ ಇರೋ ಪೆರು ದೇಶದಲ್ಲಿ ಮೊದಲು ಕಾಣಿಸಿಕೊಂಡಿತ್ತು. ಅಲ್ಲಿ 1 ಲಕ್ಷ ಜನಸಂಖ್ಯೆಗೆ 500ಕ್ಕೂ ಹೆಚ್ಚು ಜನ ಕೊರೋನಾದಿಂದ ಮೃತಪಡುತ್ತಿದ್ದಾರೆ. ಇದಕ್ಕೆ ಅಪಾಯಕಾರಿ ಲ್ಯಾಂಬ್ಡಾ ರೂಪಾಂತರಿಯೇ ಕಾರಣ ಎನ್ನಲಾಗ್ತಿದೆ. ಈ ರೂಪಾಂತರಿ ಈಗ ಜಗತ್ತಿನ ಸುಮಾರು 30 ದೇಶಗಳಿಗೆ ಹರಡಿದೆ. ಆದ್ರೆ ಭಾರತದಲ್ಲಿ ಇದುವರೆಗೆ ಅದರ ಒಂದೇ ಒಂದು ಕೇಸ್​ ವರದಿಯಾಗಿಲ್ಲ ಅಂತ ಹೇಳಲಾಗ್ತಿದೆ.. ಆದ್ರೆ ಎಚ್ಚರ ವಹಿಸುವುದು ಅಗತ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಸಲಿ ಮತ್ತು ನಕಲಿ ಅಪ್ಲಿಕೇಶನ್‌ಗಳನ್ನು ಪತ್ತೆ ಹಚ್ಚುವುದು ಹೇಗೆ ?

ಕೋವಿಡ್ ಮೂರನೇ ಅಲೆ ವಿರುದ್ಧ ಹೋರಾಡಲು ನಮ್ಮಲ್ಲಿರಬೇಕಾದ ವೈದ್ಯಕೀಯ ಉಪಕರಣಗಳು

ಮೊಬೈಲ್‌ ನಲ್ಲಿ ಮರೆತುಹೋದ ಪಾಸ್‌ವರ್ಡ್ ಅನ್ನು ಅನ್ಲಾಕ್ ಮಾಡುವುದು ಹೇಗೆ?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd