ಕೊರೊನಾ ಸಂಕಷ್ಟ –  ಏಪ್ರಿಲ್ ತಿಂಗಳಲ್ಲಿ ಕೆಲಸ ಕಳೆದುಕೊಂಡವರೆಷ್ಟು ಗೊತ್ತಾ..?

1 min read

ಕೊರೊನಾ ಸಂಕಷ್ಟ –  ಏಪ್ರಿಲ್ ತಿಂಗಳಲ್ಲಿ ಕೆಲಸ ಕಳೆದುಕೊಂಡವರೆಷ್ಟು ಗೊತ್ತಾ..?

ನವದೆಹಲಿ : ದೇಶದಲ್ಲಿ ಕಳೆದ ವರ್ಷ ಕಾಣಿಸಿಕೊಂಡ ಕೊರೊನಾ ಮಹಾಮಾರಿಯಿಂದ ಭಾರತದಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದೆ.  ಲಾಕ್ ಡೌನ್ ನಿಂದಾಗಿ ಅದೆಷ್ಟೋ ಜನರ ಬದುಕು ಮೂರಾಬಟ್ಟೆಯಾಗಿದೆ. ಲಕ್ಷಾಂತರ ಮಂದಿ ಕೆಲಸಗಳನ್ನ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ರೀತಿ ಕಳೆದ ಏಪ್ರಿಲ್ ಒಂದೇ ತಿಂಗಳಲ್ಲಿ ನಿರುದ್ಯೋಗ ದರ ಶೇ.8ಕ್ಕೆ ಏರಿಕೆಯಾಗಿದೆ. ಕಳೆದ 4 ತಿಂಗಳಲ್ಲೇ ಇದು ಅಧಿಕವಾಗಿದೆ. ಪ್ರೈವೇಟ್ ರಿಸರ್ಚ್​ ಸಂಸ್ಥೆ ಸಿಎಂಐಇ ಸೆಂಟರ್ ಫರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಲೆಕ್ಕಾಚಾರದ ಪ್ರಕಾರ ಏಪ್ರಿಲ್ ತಿಂಗಳೊಂದರಲ್ಲೇ 70 ಲಕ್ಷಕ್ಕೂ ಅಧಿಕ ಜನ ಕೆಲಸ ಕಳೆದುಕೊಂಡಿದ್ದು, ನಿರುದ್ಯೋಗ ದರ 7.97 ಪರ್ಸೆಂಟ್​​ಗೆ ಏರಿಕೆಯಾಗಿದೆ ಅಂತ ತಿಳಿಸಿದೆ.

ಕರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಅಲ್ಲಲ್ಲಿ ಲಾಕ್​ಡೌನ್​, ಕರ್ಫ್ಯೂ ಹೇರಲಾಗಿದೆ. ಪರಿಣಾಮವಾಗಿ ಕೈಗಾರಿಕೆ, ವ್ಯಾಪಾರ ಚಟುವಟಿಕೆ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಇದು ಮತ್ತೊಂದು ಹಂತದ ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ. ಭಾರತದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಗರಿಷ್ಠ ಎಂಬಷ್ಟು ಉದ್ಯೋಗ ನಷ್ಟ ಸಂಭವಿಸಿದ್ದು, ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮಾರ್ಚ್​ನಲ್ಲಿ ಶೇ. 6.5ರಷ್ಟಿದ್ದ ನಿರುದ್ಯೋಗ ಪ್ರಮಾಣ ಏಪ್ರಿಲ್​ನಲ್ಲಿ ಶೇ. 7.97ಕ್ಕೆ ತಲುಪಿದೆ. ಒಂದೇ ತಿಂಗಳಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಸೆಂಟರ್ ಫಾರ್​ ಮಾನಿಟರಿಂಗ್ ಇಂಡಿಯನ್ ಎಕಾನಮಿ ಎಂಬ ಖಾಸಗಿ ಅಧ್ಯಯನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಕಂಡುಬಂದಿದೆ. ಮೇ ತಿಂಗಳಲ್ಲೂ ನಿರುದ್ಯೋಗ ಸ್ಥಿತಿ ಮತ್ತಷ್ಟು ಜಾಸ್ತಿಯಾಗಬಹುದು ಅಂತ ಕೂಡ ಸಂಸ್ಥೆ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd