ಭಾರತ -ಇಂಗ್ಲೆಂಡ್ ಟಿ-ಟ್ವೆಂಟಿ ಸರಣಿ – ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾಗೆ ಶಾಕ್ ನೀಡಿದ ಆಂಗ್ಲರು

1 min read
Jason Roy england saaksahatv

ಭಾರತ -ಇಂಗ್ಲೆಂಡ್ ಟಿ-ಟ್ವೆಂಟಿ ಸರಣಿ – ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾಗೆ ಶಾಕ್ ನೀಡಿದ ಆಂಗ್ಲರು

 

england team india morgan saakshatvಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ  ಸೋಲು ಅನುಭವಿಸಿದೆ. ಇಂಗ್ಲೆಂಡ್ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಟೀಮ್ ಇಂಡಿಯಾಗೆ ಸಾಧಾರಣ ಮೊತ್ತವನ್ನಷ್ಟೇ ದಾಖಲಿಸಲು ಸಾಧ್ಯವಾಯ್ತು. ಅಲ್ಲದೆ ಟೀಮ್ ಇಂಡಿಯಾದ ಬೌಲರ್ ಗಳಿಗೆ ಇಂಗ್ಲೀಷ್ ಬ್ಯಾಟ್ಸ್ ಮೆನ್ ಗಳನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.
ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ ಎಂಟು ವಿಕೆಟ್ ಗಳಿಂದ ಜಯ ಸಾಧಿಸಿತ್ತು. 15.3 ಓವರ್ ಗಳಲ್ಲಿ ಇಂಗ್ಲೆಂಡ್ ತಂಡ ಗೆಲುವಿನ ನಗೆ ಬೀರಿತ್ತು. ಈ ಮೂಲಕ ಐದು ಪಂದ್ಯಗಳ ಟಿ-ಟ್ವೆಂಟಿ ಸರಣಿಯಲ್ಲಿ ಇಂಗ್ಲೆಂಡ್ ತಂಡ 1-0ಯಿಂದ ಮುನ್ನಡೆ ಪಡೆದುಕೊಂಡಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಏಳು ವಿಕೆಟ್ ಗೆ 124 ರನ್ ಗಳಿಸಿತ್ತು. ಟೀಮ್ ಇಂಡಿಯಾ ಪರ ಶ್ರೇಯಸ್ ಅಯ್ಯರ್ 67 ರನ್ ಗಳಿಸಿದ್ರೆ, ರಿಷಬ್ ಪಂತ್ 21 ರನ್ ಹಾಗೂ ಹಾರ್ದಿಕ್ ಪಾಂಡ್ಯಾ 19 ರನ್ ಗಳಿಸಿದ್ರು. ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ರನ್ ಗಳಿಸಲು ವಿಫಲರಾದ್ರು.

ಗೆಲ್ಲಲು 125 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದ ಜೇಸನ್ ರಾಯ್ ಮತ್ತು ಜೋಸ್ ಬಟ್ಲರ್ ಉತ್ತಮ ಆರಂಭವನ್ನು ನೀಡಿದ್ರು. ಮೊದಲ ವಿಕೆಟ್ ಗೆ ರಾಯ್ ಮತ್ತು ಬಟ್ಲರ್ ಎಂಟು ಓವರ್ ಗಳಲ್ಲಿ 72 ರನ್ ದಾಖಲಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ರು.
ಜೋಸ್ ಬಟ್ಲರ್ 24 ಎಸೆತಗಳಲ್ಲಿ 28 ರನ್ ಸಿಡಿಸಿ ಚಾಹಲ್ ಅವರ ಎಲ್ ಬಿ ಬಲೆಗೆ ಬಿದ್ರು.
ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜೇಸನ್ ರಾಯ್ ಕೇವಲ ಒಂದು ರನ್ ನಿಂದ ಅರ್ಧಶತಕ ವಂಚಿತರಾದ್ರು. ಜೇಸನ್ ರಾಯ್ 32 ಎಸೆತಗಳಲ್ಲಿ ಮಿಂಚಿನ 49 ರನ್ ಸಿಡಿಸಿ ವಾಷಿಂಗ್ಟನ್ ಸುಂದರ್ ಅವರ ಎಲ್ ಬಿ ಬಲೆಗೆ ಬಿದ್ರು. ಇದ್ರಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಗಳಿದ್ದವು.
ಅಂತಿಮವಾಗಿ ಇಂಗ್ಲೆಂಡ್ ತಂಡ 15.3 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತ್ತು. ಡೇವಿಡ್ ಮಲಾನ್ ಅಜೇಯ 24 ರನ್ ಗಳಿಸಿದ್ರೆ, ಜೋನಿ ಬೇರ್ ಸ್ಟೋವ್ ಅಜೇಯ 25 ದಾಖಲಿಸಿದ್ರು.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd