ರಿಷಬ್ ಪಂತ್ ಸ್ಥಾನ ಕಸಿದುಕೊಂಡ ರಾಹುಲ್,,,ವಿರಾಟ್ ನಿರ್ಧಾರ ಸರಿನಾ…?
india england first odi – KL Rahul replaces Rishabh Pant in Playing XI
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳೋದು ಒಂದು ಮಾಡೋದು ಇನ್ನೊಂದು.. ಎದುರಾಳಿ ತಂಡವನ್ನು ಗೊಂದಲವನ್ನುಂಟು ಮಾಡೋದು ಕೊಹ್ಲಿಯ ಪ್ಲಾನ್ ಆದ್ರೂ ಅದು ಎಷ್ಟರ ಮಟ್ಟಿಗೆ ಸರಿ ಎಂಬುದೇ ಗೊತ್ತಾಗುತ್ತಿಲ್ಲ.
ಟಿ-ಟ್ವೆಂಟಿ ಸರಣಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಕೆ.ಎಲ್. ರಾಹುಲ್ ಗೆ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅವಕಾಶ ನೀಡಲಾಗಿದೆ. ಪಂದ್ಯಕ್ಕಿಂತ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ರೋಹಿತ್ ಜೊತೆ ಶಿಖರ್ ಧವನ್ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಹೀಗಾಗಿ ರಾಹುಲ್ ಗೆ ಹನ್ನೊಂದರ ಬಳಗದಲ್ಲಿ ಅವಕಾಶವಿಲ್ಲ ಎಂಬು ಮಾತುಗಳು ಕೇಳಿಬಂದಿದ್ದವು.
ಆದ್ರೆ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರಾಹುಲ್ ಗೆ ಮತ್ತೊಂದು ಅವಕಾಶ ನೀಡಲಾಗಿದೆ. ಬ್ಯಾಟ್ಸ್ ಮೆನ್ ಜೊತೆ ಹೆಚ್ಚುವರಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ರಾಹುಲ್ ಗೆ ವಹಿಸಲಾಗಿದೆ.
ಆದ್ರೆ ನಾಯಕ ವಿರಾಟ್ ಕೊಹ್ಲಿಯ ಈ ನಿರ್ಧಾರದಿಂದ ಮ್ಯಾಚ್ ವಿನ್ನರ್ ರಿಷಬ್ ಪಂತ್ ಗೆ ಆಘಾತವಾಗಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿಯ ಮ್ಯಾಚ್ ವಿನ್ನರ್ ರಿಷಬ್ ಪಂತ್. ಟಿ-ಟ್ವೆಂಟಿ ಸರಣಿಯಲ್ಲೂ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಿದ್ದರು. ಆದ್ರೆ ಅತ್ಯುತ್ತಮ ಫಾರ್ಮ್ ನಲ್ಲಿರುವ
ರಿಷಬ್ ಪಂತ್ ಬದಲು ಕೆ.ಎಲ್ ರಾಹುಲ್ ಅವರಿಗೆ ಅವಕಾಶ ನೀಡಿರುವ ಬಗ್ಗೆ ಕ್ರಿಕೆಟ್ ಪಂಡಿತರು ಅಚ್ಚರಿಗೊಂಡಿದ್ದಾರೆ.
ರಾಹುಲ್ ಕಳಪೆ ಫಾರ್ಮ್ ನಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗೇ ಒಂದೇ ಒಂದು ಇನಿಂಗ್ಸ್ ಮೂಲಕ ರಾಹುಲ್ ಲಯಕಂಡುಕೊಳ್ಳುತ್ತಾರೆ ಅನ್ನೋದು ಕೂಡ ಗೊತ್ತು. ಆದ್ರೆ ಅದಕ್ಕಾಗಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಬ್ಯಾಟ್ಸ್ ಮೆನ್ ರಿಷಬ್ ಪಂತ್ ಬದಲು ರಾಹುಲ್ ಅವರನ್ನು ಹನ್ನೊಂದರ ಬಳಗದಲ್ಲಿ ಸೇರಿಸಿಕೊಂಡಿರುವುದು ಸರಿನಾ ಅನ್ನೋದು ಈಗ ಕಾಡುತ್ತಿರುವ ಪ್ರಶ್ನೆ.
ಅದೇನೇ ಇರಲಿ, ಕೆ.ಎಲ್. ರಾಹುಲ್‍ಗೆ ಇದು ಅಗ್ನಿಪರೀಕ್ಷೆ. ಈ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದ್ರೆ ಭವಿಷ್ಯದಲ್ಲಿ ರಾಹುಲ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವುದು ಕೂಡ ಕಷ್ಟ.
ಒಟ್ಟಿನಲ್ಲಿ ರಾಹುಲ್ ಭವಿಷ್ಯ ಈ ಪಂದ್ಯದಲ್ಲಿ ನಿರ್ಧಾರವಾಗಲಿದೆ. ಪುಣೆಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಮೊದಲು ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ.
#rishabpant #klrahul #teamindia #england #viratkohli #cricket #saakshatvsports #saakshatv








