ಭಾರತ ಇಂಗ್ಲೆಂಡ್ ಟೆಸ್ಟ್ – ವಿರಾಟ್ ಕೊಹ್ಲಿ ವರ್ಸಸ್ ಜೇಮ್ಸ್ ಆಂಡರ್ಸನ್… ಅಂಕಿ ಅಂಶಗಳು ಏನು ಹೇಳ್ತಾವೆ..!
ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ರೋಚಕವಾಗಿ ನಡೆಯಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಗೆ ಎಂಟ್ರಿಯಾಗಲು ಉಭಯ ತಂಡಗಳಿಗೆ ಈ ಟೆಸ್ಟ್ ಸರಣಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಹೀಗಾಗಿ ವಿಶ್ವ ಕ್ರಿಕೆಟ್ ನ ಬಲಿಷ್ಠ ತಂಡ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲು ಉಭಯ ತಂಡಗಳಿಗೆ ಇಂದು ಟೆಸ್ಟಿಂಗ್ ಟೈಮ್ ಆಗಲಿದೆ. ಮುಖ್ಯವಾಗಿ ಎಲ್ಲರ ಕಣ್ಣು ಈಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ನಾಯಕ ಜಾಯ್ ರೂಟ್ ಮೇಲೆ ಬಿದ್ದಿದೆ.
ಈ ನಡುವೆ ಉಭಯ ತಂಡಗಳ ಆಟಗಾರರ ಪೈಕಿ ಯಾರ ನಡುವೆ ಜಿದ್ದಾಜಿದ್ದಿನ ಫೈಟ್ ನಡೆಯುತ್ತೆ ಅನ್ನೋ ಕುತೂಹಲವೂ ಇದೆ. ಈಗಾಗಲೇ ಆರ್. ಅಶ್ವಿನ್ ಮತ್ತು ಬೆನ್ ಸ್ಟೋಕ್ಸ್ ನಡುವೆ ಪೈಪೋಟಿ ನಡುವೆ ಸಿಕ್ಕಾಪಟ್ಟೆ ಪೈಪೋಟಿ ನಡೆಯಬಹುದು ಅನ್ನೋದು ಕ್ರಿಕೆಟ್ ಪಂಡಿತರ ಲೆಕ್ಕಚಾರವಾಗಿದೆ. ಅದೇ ರೀತಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ರನ್ ದಾಹದಿಂದ ಬಳಲುತ್ತಿದ್ದಾರೆ. 2020ರ ವರ್ಷವನ್ನು ಬಹುತೇಕ ಕೋವಿಡ್ ಆವರಿಸಿಕೊಂಡಿತ್ತು. ಹಾಗೇ ಆಸ್ಟ್ರೇಲಿಯಾ ವಿರುದ್ದದ ಕೊಹ್ಲಿ ಕೇವಲ ಒಂದು ಪಂದ್ಯವನ್ನು ಆಡಿದ್ದರು. ಆದ್ರೆ ಕೋಹ್ಲಿ ಬ್ಯಾಟ್ ನಿಂದ ಹೆಚ್ಚು ರನ್ ಗಳು ಹರಿದುಬಂದಿರಲಿಲ್ಲ.
ಇದೀಗ ಅಪ್ಪನಾಗಿದ್ದ ಖುಷಿಯಲ್ಲಿರುವ ವಿರಾಟ್ ಕೊಹ್ಲಿ ರನ್ ಹಸಿವನ್ನು ನೀಗಿಸಿಕೊಳ್ಳುವ ಇರಾದೆಯಲ್ಲಿದ್ದಾರೆ. ಅದೇ ರೀತಿ ವಿರಾಟ್ ಕೊಹ್ಲಿ ಅವರನ್ನು ಕಟ್ಟಿ ಹಾಕಲು ಇಂಗ್ಲೆಂಡ್ ಆಟಗಾರರು ಕೂಡ ಪ್ಲಾನ್ ಮಾಡಿಕೊಂಡಿದ್ದಾರೆ.
ಮುಖ್ಯವಾಗಿ ಇಂಗ್ಲೆಂಡ್ ತಂಡದ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ವಿರಾಟ್ ಕೊಹ್ಲಿಗೆ ನಡುವಿನ ಹೋರಾಟ ಯಾವ ಮಟ್ಟದಲ್ಲಿರುತ್ತೆ ಅನ್ನೋದನ್ನು ಕಾದು ನೋಡಬೇಕು.
ಕೊಹ್ಲಿ ವರ್ಸಸ್ ಆಂಡರ್ಸನ್ 2012 -2014
ಎಸೆತಗಳು – 131
ರನ್ ಗಳು -42
ಔಟಾಗಿದ್ದು – 5 ಬಾರಿ
ಸರಾಸರಿ -8.40
ಸ್ಟ್ರೈಕ್ ರೇಟ್ – 26.20
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನ ಆರಂಭದ ದಿನಗಳಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಾಬಲ್ಯ ಸಾಧಿಸಲು ವಿಫಲರಾಗಿದ್ದರು. 2012ರಿಂದ 2014ರ ಸರಣಿಗಳಲ್ಲಿ ವಿರಾಟ್ ಕೊಹ್ಲಿ ಅವರನ್ನು ಕಾಡಿದ್ದು ಜೇಮ್ಸ್ ಆಂಡರ್ಸನ್
ಜೇಮ್ಸ್ ಅಂಡರ್ಸನ್ ಅವರ 131 ಎಸೆತಗಳಲ್ಲಿ ವಿರಾಟ್ ಗಳಿಸಿದ್ದು 42 ರನ್ ಗಳು ಮಾತ್ರ. ಹಾಗೇ ಐದು ಬಾರಿ ವಿಕೆಟ್ ಒಪ್ಪಿಸಿದ್ದರು. ಸರಾಸರಿ 8.40 ಹಾಗೂ ಸ್ಟ್ರೈಕ್ ರೇಟ್ 32.06.
ಆದ್ರೆ 2016ರಿಂದ ಇಲ್ಲಿಯವರೆಗೆ ವಿರಾಟ್ ಕೊಹ್ಲಿ ಜೇಮ್ಸ್ ಆಂಡರ್ಸನ್ ಗೆ ಕಂಟಕವಾಗಿ ಪರಿಣಮಿಸಿದ್ದಾರೆ. ಆಂಡರ್ಸನ್ ಅವರ 382 ಎಸೆತಗಳಲ್ಲಿ ವಿರಾಟ್ ಕೊಹ್ಲಿ 47.91ರ ಸರಾಸರಿಯಲ್ಲಿ 183 ರನ್ ದಾಖಲಿಸಿದ್ದಾರೆ. ಆದ್ರೆ ಒಂದು ಬಾರಿಯೂ ವಿಕೆಟ್ ಒಪ್ಪಿಸಿಲ್ಲ.
ಇನ್ನು 2020ರಲ್ಲಿ ವಿರಾಟ್ ಹೆಸರಿನಲ್ಲಿ ಟೆಸ್ಟ್ ಶತಕ ದಾಖಲಾಗಿಲ್ಲ. ಆದ್ರೆ ಜೇಮ್ಸ್ ಆಂಡರ್ಸನ್ ಹೆಸರಿನಲ್ಲಿ 600 ಟೆಸ್ಟ್ ವಿಕೆಟ್ ಗಳ ಸಾಧನೆ ಅಚ್ಚೊತ್ತಿದೆ. ಇದೀಗ ಜೇಮ್ಸ್ ಆಂಡರ್ಸನ್ ತನ್ನ ಕ್ರಿಕೆಟ್ ಬದುಕಿನ ಇಳಿ ವಯಸ್ಸಿನಲ್ಲಿದ್ದಾರೆ. ಆದ್ರೆ ವಿರಾಟ್ ಕೊಹ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದಾರೆ. ಹಾಗೇ ರನ್ ದಾಹದಲ್ಲೂ ಇದ್ದಾರೆ.
ಒಟ್ಟಾರೆ ಜೇಮ್ಸ್ ಆಂಡರ್ಸನ್ ಅವರ ಅನುಭವದ ಜೊತೆಗೆ ಮಾರಕ ದಾಳಿಗೆ ವಿರಾಟ್ ಕೊಹ್ಲಿ ಬ್ಯಾಟ್ಸ್ ತಕ್ಕ ಉತ್ತರ ನೀಡುತ್ತಾ ಅನ್ನೋದನ್ನು ಕಾದು ನೋಡಬೇಕು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel