India | ವಿಶ್ವದಾಖಲೆಯನ್ನು ಸರಿಗಟ್ಟಿದ ಟೀಂ ಇಂಡಿಯಾ
ನವದೆಹಲಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಏಳು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.
ಭಾರತದ ಪರ ಸ್ಪಿನ್ನರ್ ಗಳು ಅಬ್ಬರಿಸಿದ ಕಾರಣ ದಕ್ಷಿಣಾಫ್ರಿಕಾ ತಂಡ 27.1 ಓವರ್ ಗಳಲ್ಲಿ 99 ರನ್ ಗಳಿಗೆ ಸರ್ವಪತನಗೊಂಡಿತು.
ಈ ಗುರಿಯನ್ನ ಬೆನ್ನಟ್ಟಿದ ಟೀಂ ಇಂಡಿಯಾ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಟಾರ್ಗಟ್ ಮುಟ್ಟಿತು.
ಭಾರತದ ಪರ ಶುಭ್ ಮನ್ ಗಿಲ್ 49 ರನ್, ಶ್ರೇಯಸ್ ಅಯ್ಯರ್ 28 ರನ್ ಗಳಿಸಿದರು.
ಈ ಗೆಲುವಿನೊಂದಿಗೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ಹೆಸರಿನಲ್ಲಿದ್ದ ಒಂದು ವಿಶ್ವ ದಾಖಲೆಯನ್ನು ಸರಿಗಟ್ಟಿದೆ.
ಒಂದು ಕ್ಯಾಲೆಂಡರ್ ಇಯರ್ ನಲ್ಲಿ ಅತ್ಯಧಿಕ ಗೆಲುವುಗಳನ್ನು ಸಾಧಿಸಿದ ತಂಡವಾಗಿದೆ ಟೀಂ ಇಂಡಿಯಾ.

2003 ರಲ್ಲಿ ಆಸ್ಟ್ರೇಲಿಯಾ ತಂಡ ಎಲ್ಲಾ ಮಾದರಿ ಕ್ರಿಕೆಟ್ ಗಳಲ್ಲಿ ಸೇರಿ 38 ಗೆಲುವುಗಳನ್ನು ಕಂಡಿತ್ತು.
ಈ ವರ್ಷ ಟೀಂ ಇಂಡಿಯಾ ಇಲ್ಲಿಯವರೆಗೂ 38 ಗೆಲುವುಗಳನ್ನು ಸಾಧಿಸಿದೆ.
ಆದ್ರೆ ಭಾರತಕ್ಕೆ ಇನ್ನೂ 11 ಪಂದ್ಯಗಳು ಬಾಕಿ ಇವೆ. ಈಗಾಗಲೇ ಆಸ್ಟ್ರೇಲಿಯಾ ದಾಖಲೆಯನ್ನು ಟೀಂ ಇಂಡಿಯಾ ಬ್ರೇಕ್ ಮಾಡುವುದು ಖಚಿತವಾಗಿದೆ.
ಭಾರತ ಕ್ರಿಕೆಟ್ ತಂಡ ಈ ವರ್ಷ 56 ಪಂದ್ಯಗಳಲ್ಲಿ 23 ಟಿ 20, 2 ಟೆಸ್ಟ್, 13 ಏಕದಿನ ಪಂದ್ಯಗಳನ್ನು ಗೆದ್ದಿದೆ.
ಸತತ ಐದು ಸೋಲುಗಳಿಂದ ಈ ಕ್ಯಾಲೆಂಡರ್ ವರ್ಷವನ್ನು ಪ್ರಾರಂಭಿಸಿದ ಭಾರತ ತಂಡ ಆ ಬಳಿಕ ಹಿಂದುರುಗಿ ನೋಡಲೇ ಇಲ್ಲ.







