ವರ್ಷದ 3ನೇ ತ್ರೈಮಾಸಿಕದಲ್ಲಿ ಚೇತರಿಸಿಕೊಂಡ ಬಾರತದ GDP
ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅಂದ್ರೆ ಅಕ್ಟೋಬರ್ ನಿಂದ- ಡಿಸೆಂಬರ್ 2020 ರವರೆಗಿನ ಅವಧಿಯಲ್ಲಿ ಭಾರತದ GDPಯು ಶೇಕಡಾ 0.4 ರಷ್ಟು ಏರಿಕೆಯಾಗಿದೆ. ಕೊರೊನಾ ಹಾವಳಿಯಯಿಂದ ಕಳೆದೆರೆಡು ತ್ರೈಮಾಸಿಕದಲ್ಲಿ ಮುಗ್ಗರಿಸಿದ್ದ ಜಿಡಿಪಿ ಸದ್ಯ 3ನೇ ತ್ರೈಮಾಸಿಕದಲ್ಲಿ ಚೇತರಿಸಿಕೊಂಡಿದೆ. ರಾಷ್ಟ್ರೀಯ ಸಾಂಖ್ಯಿಯ ಕಚೇರಿ ಶುಕ್ರವಾರ ಜಿಡಿಪಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಡಿಸೆಂಬರ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಭಾರತ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ. ಆದ್ರೆ ರಾಯಿಟರ್ಸ್ ನಡೆಸಿದ್ದ ಸಮೀಕ್ಷೆಯಲ್ಲಿ ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 0.5ರಷ್ಟು ಬೆಳವಣಿಗೆ ಕಾಣಲಿದೆ ಎಂದು ವರದಿಯಾಗಿತ್ತು. ಆದರೆ ಈ ಸಮೀಕ್ಷೆ ಇದೀಗ ಹುಸಿಯಾಗಿದ್ದು, ಅಮೀಕ್ಷೆಗಿಂತಲೂ ಕಡಿಮೆ (ಶೇ.0.4) ಬೆಳವಣಿಗೆ ದಾಖಲಾಗಿದೆ. ಆದರೆ ಕಳೆದೆರೆಡು ತ್ರೈಮಾಸಿಕಗಳಿಗೆ ಹೋಲಿಗೆ ಮಾಡಿದ್ರೆ ಸದ್ಯ ಸಕಾರಾತ್ಮಕವಾಗಿದ್ದು, ನಿಧಾನವಾಗಿ ಟ್ರ್ಯಾಕ್ ಗೆ ಬರುತ್ತಿದೆ.