`ಭಾರತ ಟಿ-20 ವಿಶ್ವಕಪ್ ಗೆಲ್ಲೋದು ಖಚಿತ’ವಂತೆ T20 World Cup saaksha tv
ದುಬೈ : ಐಸಿಸಿ ಟಿ-20 ವಿಶ್ವಕಪ್ ಸಂಗ್ರಾಮ ರಂಗೇರುತ್ತಿದ್ದು, ಅಭ್ಯಾಸ ಪಂದ್ಯಗಳಲ್ಲಿ ಟೀಂ ಇಂಡಿಯಾದ ಬ್ಲೂ ಪ್ಯಾಂಥರ್ಸ್ ಘರ್ಜಿಸಿವೆ. ಕೊಹ್ಲಿ ಸೇನೆ ತನ್ನ ಎರಡು ಅಭ್ಯಾಸ ಪಂದ್ಯಗಳಲ್ಲಿ ಎದುರಾಳಿಗಳ ಹುಟ್ಟಡಗಿಸಿದೆ.
ಟೀಂ ಇಂಡಿಯಾ ತನ್ನ ವಾರ್ಮ್ ಅಪ್ ಮ್ಯಾಚ್ ಗಳಲ್ಲಿ ಬಲಿಷ್ಠ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾವನ್ನು ಸೋಲಿಸಿ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಈ ವಿಭಾಗಗಳಲ್ಲಿ ರವಿಶಾಸ್ತ್ರಿ ಹುಡುಗರು ಬೊಂಬಾಟ್ ಪ್ರದರ್ಶನ ನೀಡಿದ್ದಾರೆ.
ಟೀಂ ಇಂಡಿಯಾದ ಸದ್ಯದ ಪ್ರದರ್ಶನ ನೋಡಿದ್ರೆ ವಿಶ್ವಕಪ್ ಗೆಲ್ಲೋದ್ರಲ್ಲಿ ಡೌಟೇ ಇಲ್ಲ ಎಂಬೋದು ಕ್ರಿಕೆಟ್ ಪಂಡಿತರ ಮಾತು..
ಈ ನಡುವೆ ಟೀಂ ಇಂಡಿಯಾ ಪ್ರದರ್ಶನವನ್ನು ಮೆಚ್ಚಿಕೊಂಡಿರುವ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ವಾನ್, ವಿರಾಟ್ ಕೊಹ್ಲಿ ನೇತೃತ್ವದ ತಂಡವು ಟಿ20 ವಿಶ್ವಕಪ್ ಗೆಲ್ಲಲು ಎದುರು ನೋಡುತ್ತಿದೆ. ಭಾರತ ತಂಡದ ವಾರ್ಮ್ ಅಪ್ ಆಟದ ವೈಖರಿ ನೋಡಿದರೆ ಕಪ್ ಗೆಲ್ಲೋದು ಖಚಿತ ಎಂದು ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ಟೀಂ ಇಂಡಿಯಾ ಸೋಮವಾರ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್‍ಗಳಿಂದ ಸೋಲಿಸಿತ್ತು. ಬುಧವಾರ ಆಸ್ಟ್ರೇಲಿಯಾ ತಂಡವನ್ನು 9 ವಿಕೆಟ್‍ಗಳಿಂದ ಮಣಿಸಿದೆ.