ಬೆಂಗಳೂರು : ಚಂದ್ರಯಾನ-3 (Chandrayaan-3)ರಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ.
ಲ್ಯಾಂಡರ್ ಚಂದ್ರನ (Moon) ಮೇಲ್ಮೈಯನ್ನು ಸ್ಪರ್ಶಿಸಿದ ನಂತರ ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿದಿದೆ. ಈ ಲ್ಯಾಂಡಿಂಗ್ ನಂತರದ ಕೆಲಸಗಳು ಈಗ ಆರಂಭವಾಗಿವೆ. ವಿಜ್ಞಾನಿಗಳು ಒಂದು ಚಂದ್ರನ ದಿನಕ್ಕೆ ಅಂದರೆ 14 ದಿನಗಳ ರೋವರ್ ಕಾರ್ಯಾಚರಣೆಗಳ ಕುರಿತು ತಿಳಿಯಲು ಆರಂಭಿಸಲಾಗಿದೆ.
ವಿಕ್ರಮ್ ಲ್ಯಾಂಡರ್ನಲ್ಲಿ ಡೇಟಾವನ್ನು ಒದಗಿಸುವ ಐದು ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಿದ್ದು, ಲ್ಯಾಂಡಿಂಗ್ ನಂತರ ಪ್ರಗ್ಯಾನ್ ರೋವರ್ಗಾಗಿ ರಾಂಪ್ ರಚಿಸುತ್ತದೆ. ಆರು ಚಕ್ರಗಳ ಪ್ರಗ್ಯಾನ್ ರೋವರ್ನಲ್ಲಿ ಎರಡು ಚಕ್ರಗಳಲ್ಲಿ ಒಂದರಲ್ಲಿ ಅಶೋಕ ಚಕ್ರದ (Ashoka Emblem) ಚಿಹ್ನೆಯಿದ್ದು, ಮತ್ತೊಂದರಲ್ಲಿ ಇಸ್ರೋ (ISRO) ಲಾಂಛನವಿದೆ. ಇವುಗಳು ಚಂದ್ರನ ಮೇಲ್ಮೈ ಮೇಲೆ ಭಾರತದ ಮುದ್ರೆಯನ್ನು ಅಚ್ಚು ಒತ್ತುತ್ತವೆ. ಈ ಮುದ್ರೆ ಸಾವಿರಾರು ವರ್ಷಗಳ ಕಾಲ ಇರಲಿದೆ.
ಚಂದ್ರನ ಮೇಲೆ ಗಾಳಿ, ನೀರು ಇಲ್ಲ ಎಂದು ವಿಜ್ಞಾನಿಗಳು ಹೇಳುತ್ತಲೇ ಇದ್ದಾರೆ. ಹೀಗಾಗಿ ಇದು ಸಾವಿರಾರು ವರ್ಷಗಳ ಕಾಲ ಇರುತ್ತದೆ. ಈ ರೋವರ್ ಚಂದ್ರನ ಮೇಲ್ಮೈಯನ್ನು ಸ್ಕ್ಯಾನ್ ಮಾಡಲು ನ್ಯಾವಿಗೇಷನ್ ಕ್ಯಾಮೆರಾಗಳನ್ನು ಬಳಸುತ್ತದೆ. ರೋವರ್ನ ವೈಜ್ಞಾನಿಕ ಪೇಲೋಡ್ಗಳು ಚಂದ್ರನ ಅಂಶಗಳು, ವಾತಾವರಣ, ಸೇರಿದಂತೆ ಹಲವು ವಿಷಯಗಳ ಕುರಿತು ಅಧ್ಯಯನ ಮಾಡುತ್ತದೆ.
ಚಂದ್ರನ ಮೇಲಿನ ಕಂಪನ, ಒಳರಚನೆ ಸುಳಿವು ತಿಳಿಯುತ್ತದೆ. ಚಂದ್ರನ ಮಣ್ಣಿನಿಂದ ರಾಸಾಯನಿಕ ಸಂಯೋಜನೆ ಸಿಗುತ್ತದೆ. ಉಷ್ಣ ಗುಣಲಕ್ಷಣಗಳನ್ನು ಅಧ್ಯಯನ ಮಾಡಲಾಗುತ್ತದೆ.