ಭಾರತ ನನ್ನ ಒಂದು ಭಾಗ ನಾನು ಹೋದಲೆಲ್ಲ ಅದನ್ನ ಕೊಂಡಯ್ಯುತ್ತೇನೆ – ಸುಂದರ್ ಪಿಚೈ…
ಭಾರತ ನನ್ನ ಒಂದು ಭಾಗವಾಗಿದೆ, ನಾನು ಹೋದಲ್ಲೆಲ್ಲಾ ಅದನ್ನ ಕೊಂಡೊಯ್ಯುತ್ತೇನೆ ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಹೇಳಿದ್ದಾರೆ, U S ನಲ್ಲಿರುವ ಭಾರತೀಯ ರಾಯುಭಾರಿಗಳು ಪ್ರತಿಷ್ಠಿತ ಪದ್ಮ ಭೂಷಣ್ ಪ್ರಶಸ್ತಿಯನ್ನು ಪಿಚೈ ಅವರಿಗೆ ಪ್ರಧಾನ ಮಾಡಿದ್ದಾರೆ.
ಇಂಡೋ ಅಮೇರಿಕನ್ ಗೂಗಲ್ ಪಿಚೈಗೆ ವ್ಯಾಪರ ಮತ್ತು ಕೈಗಾರಿಕಾ ವಿಭಾಗದಲ್ಲಿ ಭಾರತ ಸರ್ಕಾರ 2022 ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನ ಪ್ರಧಾನ ಮಾಡಲಾಯಿತು. ತಮಿಳುನಾಡಿನ ಮಧುರೈ ಮೂಲದ ಪಿಚೈ ಅವರನ್ನ ಈ ವರ್ಷದ ಆರಂಭದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಶುಕ್ರವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತಮ್ಮ ಆಪ್ತ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಭಾರತದ ಮೂರನೇ ಅತಿ ಹೆಚ್ಚು ನಾಗರಿಕ ಪ್ರಶಸ್ತಿಯನ್ನ ಸುಂದರೈ ಪಿಚೈ ಸ್ವೀಕರಿಸಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತದ ಕಾನ್ಸುಲ್ ಜನರಲ್, ಟಿ ವಿ ನಾಗೇಂದ್ರ ಪ್ರಸಾದ್ ಸಹ ಉಪಸ್ಥಿತರಿದ್ದರು.
“ಈ ಅಪಾರ ಗೌರವಕ್ಕಾಗಿ ನಾನು ಭಾರತ ಸರ್ಕಾರ ಮತ್ತು ಭಾರತದ ಜನರಿಗೆ ತುಂಬಾ ಕೃತಜ್ಞನಾಗಿದ್ದೇನೆ. ನನ್ನನ್ನು ರೂಪಿಸಿದ ದೇಶವು ಈ ರೀತಿ ಗೌರವಿಸುವುದು ನಂಬಲಾಗದಷ್ಟು ಅರ್ಥಪೂರ್ಣವಾಗಿದೆ” ಎಂದು 50 ವರ್ಷದ ಪಿಚೈ ಅವರು ಭಾರತದ ಪ್ರಶಸ್ತಿಯನ್ನು ಸ್ವೀಕರಿಸುವಾಗ ಹೇಳಿದರು ಎಂದು ಯುಎಸ್ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಹೇಳಿದ್ದಾರೆ.
“ಭಾರತವು ನನ್ನ ಒಂದು ಭಾಗವಾಗಿದೆ. ನಾನು ಹೋದಲ್ಲೆಲ್ಲಾ ಅದನ್ನು ನನ್ನೊಂದಿಗೆ ಒಯ್ಯುತ್ತೇನೆ. ಎಂದು ಅವರು ಹೇಳಿದರು. India is a part of me and I carry it with me wherever I go – Sundar Pichai