ಚಬಹಾರ್ ರೈಲು ಯೋಜನೆಯಿಂದ ಭಾರತವನ್ನು ಕೈಬಿಡಲಾಗಿಲ್ಲ – ಇರಾನ್
ಹೊಸದಿಲ್ಲಿ, ಜುಲೈ 22: ಚಬಹಾರ್ ರೈಲು ಯೋಜನೆಯಿಂದ ಭಾರತವನ್ನು ಕೈಬಿಡಲಾಗಿದೆ ಎಂಬ ವರದಿಗಳನ್ನು ಇರಾನ್ ಸೋಮವಾರ ನಿರಾಕರಿಸಿದ್ದು, ಈ ಸುದ್ದಿಯನ್ನು ಹರಿಯಬಿಡುವುದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಅಡಗಿವೆ ಎಂದು ಆರೋಪಿಸಿದೆ.
ಇರಾನ್ ನ ಭಾರತೀಯ ರಾಯಭಾರ ಕಚೇರಿಯು ಚಬಹಾರ್-ಜಹೇದನ್ ರೈಲ್ವೆ ಯೋಜನೆಯ ಬಗ್ಗೆ ಪರಿಶೀಲನೆ ನಡೆಸಲು ರಾಯಭಾರಿ ಗಡ್ಡಮ್ ಧರ್ಮೇಂದ್ರ ಅವರನ್ನು ಇರಾನ್ ನ ಉಪಮಂತ್ರಿ ಹಾಗೂ ರಸ್ತೆ ಮತ್ತು ರೈಲ್ವೆ ಮುಖ್ಯಸ್ಥ ಸಯೀದ್ ರಸೌಲಿ ಆಹ್ವಾನಿಸಿದ್ದಾರೆ ಎಂದು ತಿಳಿಸಿದೆ.
ಇರಾನ್ ಭಾರತವನ್ನು ಚಬಹಾರ್-ಜಹೇದಾನ್ ರೈಲ್ವೆ ಯೋಜನೆಯಿಂದ ಹೊರಗಿಟ್ಟಿದೆ ಎಂಬ ಇತ್ತೀಚಿನ ವರದಿಗಳ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳಿವೆ ಎಂದು ರಸೌಲಿ ಹೇಳಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ರಾಯಭಾರಿ ಗಡ್ಡಮ್ ಧರ್ಮೇಂದ್ರ ಅವರನ್ನು ಇಂದು ಉಪ ಮಂತ್ರಿ ಹಾಗೂ ರಸ್ತೆ ಮತ್ತು ಇರಾನ್ ರೈಲ್ವೆ ಮುಖ್ಯಸ್ಥ ಸಯೀದ್ ರಸೌಲಿ ಆಹ್ವಾನಿಸಿದ್ದಾರೆ.
ಇರಾನ್ ಭಾರತವನ್ನು ಚಬಹಾರ್-ಜಹೇದಾನ್ ರೈಲ್ವೆಯಿಂದ ಹೊರಗಿಟ್ಟಿದೆ ಎಂಬ ಇತ್ತೀಚಿನ ವರದಿಗಳ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳಿವೆ ಎಂದು ರಸೌಲಿ ಹೇಳಿದ್ದಾರೆ ಎಂದು ಇರಾನ್‌ನ ಭಾರತೀಯ ರಾಯಭಾರ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ.
ಕಳೆದ ವಾರ, ಇರಾನ್‌ನ ಹಸನ್ ರೂಹಾನಿ ನೇತೃತ್ವದ ಸರ್ಕಾರವು ಭಾರತವನ್ನು ಜಹೇದಾನ್ ನಿರ್ಮಾಣ ಯೋಜನೆಯಿಂದ ಹೊರಗಿಡಲು ನಿರ್ಧರಿಸಿದೆ ಎಂದು ಹೇಳಿಕೆಯೊಂದು ವರದಿಯಾಗಿತ್ತು. ಅಫ್ಘಾನಿಸ್ತಾನದ ಗಡಿಯಲ್ಲಿ ಚಬಹಾರ್ ಬಂದರಿನಿಂದ ಜಹೇದಾನ್ ವರೆಗೆ ರೈಲು ಮಾರ್ಗವನ್ನು ನಿರ್ಮಿಸಲು ಭಾರತ ಇರಾನ್ ಜೊತೆ ಒಪ್ಪಂದ ಮಾಡಿಕೊಂಡಿತ್ತು