ವಿಶ್ವ ಕ್ರಿಕೆಟ್ ನಲ್ಲಿ ಭಾರತ ಪ್ರಕಾಶಿಸುತ್ತಿದೆ.. ಪಾಕಿಸ್ತಾನ ನಶಿಸುತ್ತಿದೆ – ರಶೀದ್ ಲತೀಫ್

1 min read
rashod lathif saakshatv pakistan

ವಿಶ್ವ ಕ್ರಿಕೆಟ್ ನಲ್ಲಿ ಭಾರತ ಪ್ರಕಾಶಿಸುತ್ತಿದೆ.. ಪಾಕಿಸ್ತಾನ ನಶಿಸುತ್ತಿದೆ – ರಶೀದ್ ಲತೀಫ್

team india saakshatvಐಪಿಎಲ್ ಭಾರತೀಯ ಕ್ರಿಕೆಟ್ ಮಟ್ಟವನ್ನು ಉತ್ತುಂಗಕ್ಕೇರಿಸಿದೆ. ವಿಶ್ವ ಕ್ರಿಕೆಟ್ ನಲ್ಲಿ ಭಾರತ ಪ್ರಕಾಶಿಸುತ್ತಿದೆ. ಪಾಕಿಸ್ತಾನ ನಶಿಸುತ್ತಿದೆ ಎಂದು ಪಾಕಿಸ್ತಾನ ಮಾಜಿ ವಿಕೆಟ್ ಕೀಪರ್ ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ನಿಂದಾಗಿ ಭಾರತೀಯ ಕ್ರಿಕೆಟಿಗರಿಗೆ ಕಲಿಯಲು ಸಾಕಷ್ಟು ಅವಕಾಶವನ್ನು ಕಲ್ಪಿಸಿದೆ. ಭಾರತದ ಮಾಜಿ ಆಟಗಾರರು, ವಿದೇಶಿ ಆಟಗಾರರು, ವಿದೇಶಿ ಕೋಚ್ ಗಳಿಂದ ಭಾರತದ ಯುವ ಕ್ರಿಕೆಟಿಗರಿಗೆ ಸಾಕಷ್ಟು ಲಾಭವಾಗಿದೆ. ಹೊಸತನವನ್ನು ಕಲಿತುಕೊಂಡು ಭಾರತೀಯ ಕ್ರಿಕೆಟ್ ಅನ್ನು ಮೇರುಮಟ್ಟಕ್ಕೆ ಬೆಳೆಸಲು ಐಪಿಎಲ್ ಮಹತ್ತರವಾದ ಪಾತ್ರವನ್ನು ವಹಿಸಿದೆ ಎಂದು ರಶೀದ್ ಲತೀಫ್ ಹೇಳಿದ್ದಾರೆ.
ಇನ್ನು ಪಾಕಿಸ್ತಾನದ ಕ್ರಿಕೆಟ್ ಬಗ್ಗೆ ಮಾತನಾಡಿದ ರಶೀದ್ ಲತೀಫ್, 2010ರ ನಂತರ ಪಾಕ್ ಕ್ರಿಕೆಟ್ ತಳಮಟ್ಟಕ್ಕೆ ಇಳಿದಿದೆ. ಪಾಕ್ ನಲ್ಲಿ ಯುವ ಕ್ರಿಕೆಟಿಗರ ಪ್ರತಿಭಾನ್ವೇಷಣೆಯಾಗುತ್ತಿಲ್ಲ. ಹಿರಿಯ ಕ್ರಿಕೆಟಿಗರ ಮಾರ್ಗದರ್ಶನವೂ ಸಿಗುತ್ತಿಲ್ಲ. ಅದಕ್ಕೆ ಪೂರಕವಾದ ವಾತಾವರಣವೂ ಇಲ್ಲ. ಅಷ್ಟೇ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಪಾಕಿಸ್ತಾನದ ಕೋಚ್ ಗಳು, ಹಿರಿಯ ಆಟಗಾರರು ಭಾಗವಾಗಿಲ್ಲ. ಇದು ಬಹಳ ಗಂಭೀರವಾದ ವಿಷಯ ಎಂಬುದು ಲತೀಫ್ ಅವರ ಅಭಿಮತತವಾಗಿದೆ.
ಮುಖ್ಯವಾಗಿ ಭಾರತೀಯ ಕ್ರಿಕೆಟ್ ಮಂಡಳಿಯ ದೂರದೃಷ್ಟಿಯ ಚಿಂತನೆಯಿಂದ ಟೀಮ್ ಇಂಡಿಯಾದ ಚಿತ್ರಣವೇ ಬದಲಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಭಾರತೀಯ ಕ್ರಿಕೆಟ್ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ಬಿಸಿಸಿಐ ಕೂಡ ಪ್ಲಾನ್ ಮಾಡುತ್ತಿದೆ. ಯುವ ಕ್ರಿಕೆಟಿಗರ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸುತ್ತಿದೆ. ಆದ್ರೆ ಪಾಕಿಸ್ತಾನದಲ್ಲಿ ಹಾಗಲ್ಲ. ಹೊಸ ತಂತ್ರಜ್ಞಾನದ ಬಳಕೆಯಾಗುತ್ತಿಲ್ಲ. ಯುವ ಕ್ರಿಕೆಟಿಗರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ 2010ರ ನಂತರ ಪಾಕ್ ಕ್ರಿಕೆಟ್ ಕೆಳಮಟ್ಟಕ್ಕೆ ಇಳಿದ್ರೆ, ಭಾರತೀಯ ಕ್ರಿಕೆಟ್ ಮೆಲ್ದರ್ಜೆಗೇರಿದೆ ಎಂದು ರಶೀದ್ ಲತೀಫ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
virat kohli team india t-20 cricketಭಾರತದ ತಂಡದಲ್ಲಿ ಅತ್ಯದ್ಭುತವಾದ ಆಟಗಾರರು ಇದ್ದಾರೆ. ಹಾಗಾಗಿ ಏಕಕಾಲದಲ್ಲಿ ಎರಡು ದೇಶಗಳ ವಿರುದ್ಧ ಆಡುವಂತಹ ತಂಡವನ್ನು ಕಟ್ಟಲು ಸಾಧ್ಯವಾಗುತ್ತಿದೆ. ಟೀಮ್ ಇಂಡಿಯಾದ ಬೆಂಚ್ ಸ್ಟ್ರೇಂತ್ ಬಲಿಷ್ಠವಾಗಿದೆ. ಯಾರೇ ಗಾಯಗೊಂಡ್ರೂ ತಂಡಕ್ಕೆ ಏನು ತೊಂದರೆಯಾಗುತ್ತಿಲ್ಲ. ಇದಕ್ಕೆ ಕಳೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸರಣಿಗಳೇ ನಿರ್ದಶನ. ಅಷ್ಟೇ ಅಲ್ಲ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆಯಲ್ಲೇ ಟೀಮ್ ಇಂಡಿಯಾದ ಇನ್ನೊಂದು ತಂಡ ಶ್ರೀಲಂಕಾದಲ್ಲಿ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗಳನ್ನು ಆಡುತ್ತಿದೆ ಎಂದು ರಶೀದ್ ಲತೀಫ್ ಭಾರತೀಯ ಕ್ರಿಕೆಟ್ ನ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd