ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರೋ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವನಿತೆಯರು ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಇಂಡಿಯನ್ ವುಮೆನ್ಸ್ ತಂಡ ನ್ಯೂಜಿಲೆಂಡ್ ವಿರುದ್ಧ ಕೇವಲ 4 ರನ್ ಗಳಿಂದ ಗೆಲುವು ಸಾಧಿಸಿ, ಸೆಮಿ ಫೈನಲ್ ಪ್ರವೇಶಿಸಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಓಪನರ್ ಆಗಿ ಬ್ಯಾಟಿಂಗ್ ಮಾಡಿದ ಶಫಾಲಿ ವರ್ಮಾ 4 ಫೋರ್, 3 ಸಿಕ್ಸ್ ಸಮೇತ 46 ರನ್ ಗಳನ್ನ ಬಾರಿಸಿದ್ರು. ಆದ್ರೆ, ಸ್ಮೃತಿ ಮಂದಾನ ಕೇವಲ 11 ರನ್ ಗೆ ಔಟ್ ಆಗಿ ಪೆವಿಲಿಯನ್ ಸೇರಿದ್ರು. ಇನ್ನು ವಿಕೆಟ್ ಕೀಪರ್ ತನಿಯಾ ಭಾಟಿಯಾ 23 ರನ್ ಗಳನ್ನ ಬಾರಿಸಿ ತಂಡಕ್ಕೆ ನೆರವಾದ್ರು. ಉಳಿದವರು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ರು. ಒಟ್ಟಾರೆ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ಗೆ 133ರನ್ ಕಲೆ ಹಾಕಿತು.
ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ 20 ಓವರ್ ಗಳಿಗೆ 6 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತು. ಈ ಮೂಲಕ ಭಾರತ ಗೆಲುವಿನ ನಗೆ ಬೀರಿತು. ನ್ಯೂಜಿಲೆಂಡ್ ಪರ ಮಡ್ಯಾ ಗ್ರೀನ್ 24, ಮರ್ಟಿನ್ 25, ಅಮೆಲಿಯಾ ಕೆರ್ 34 ರನ್ ಗಳಿಸಿದರು. ಇನ್ನು ಇದಕ್ಕೂ ಮೊದಲು ಭಾರತ 2009, 2010 ಮತ್ತು 2018 ರಲ್ಲಿ 20-ಟ್ವೆಂಟಿ ವಿಶ್ವಕಪ್ ನಲ್ಲಿ ಸೆಮಿಫೈನಲ್ ತಲುಪಿತ್ತು.