ನವದೆಹಲಿ: ಹೆಮ್ಮಾರಿ ಕೊರೊನಾವನ್ನು ಭಾರತದಿಂದ ಹೊಡೆದೋಡಿಸಲು ಕ್ಷಣಗಣನೆ ಶುರುವಾಗಿದ್ದು, ಭಾರತದಲ್ಲೇ ತಯಾರಾಗಿರುವ ಕೊರೊನಾ ಲಸಿಕೆ ಕೊವ್ಯಾಕ್ಸಿನ್ಗೆ ಗೆ ಇಂದೇ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.
ಭಾರತದಲ್ಲೇ ತಯಾರಾಗಿರುವ ಪುಣೆಯ ಸೀರಮ್ ಇನ್ಸ್ಸ್ಟಿಟೂಟ್, ಇಂಗ್ಲೆಂಡ್ನ ಆಕ್ಸ್ಫರ್ಡ್, ಅಸ್ತ್ರಜೆನಿಕಾ ಜಂಟಿ ಸಹಭಾಗಿತ್ವದಲ್ಲಿ ತಯಾರಾಗಿರುವ ಕೋವ್ಯಾಕ್ಸಿನ್ ಬಳಕೆಗೆ ಬ್ರಿಟನ್ ಸರ್ಕಾರ ಅನುಮತಿ ನೀಡಿದೆ.
ಬ್ರಿಟನ್ ಸರ್ಕಾರ ಅಸ್ತ್ರಜೆನಿಕಾ ಲಸಿಕೆ ಬಳಕೆಗೆ ಅನುಮತಿ ನೀಡುತ್ತಿದ್ದಂತೆ ಭಾರತದಲ್ಲೂ ಕೊವ್ಯಾಕ್ಸಿನ್ ಲಸಿಕೆ ಬಳಿಕೆಗೆ ಇಂದೇ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊರೊನಾ ಲಸಿಕೆ ಕುರಿತಂತೆ ವಿಷಯ ತಜ್ಞರ ತುರ್ತು ಸಭೆ ಆರಂಭವಾಗಿದ್ದು, ಇಂದೇ ಭಾರತದಲ್ಲಿ ಲಸಿಕೆ ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ಕೊವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ಕೋರಿ ಭಾರತೀಯ ಸೀರಮ್ ಇನ್ಸ್ಸ್ಟಿಟ್ಯೂಟ್ ಅರ್ಜಿ ಸಲ್ಲಿಸಿದೆ. ಸೀರಮ್ ಇನ್ಸ್ಸ್ಟಿಟ್ಯೂಟ್ನ ಅರ್ಜಿ ಕುರಿತಂತೆ ವಿಷಯ ತಜ್ಞರ ಸಭೆಯಲ್ಲಿ ಅನುಮೋದನೆ ಸಿಕ್ಕರೆ, ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಡಿಎಂಸಿಎ ಅನುಮತಿ ಸಿಗುತ್ತಿದ್ದಂತೆ ಭಾರತದಲ್ಲಿ ಹೆಮ್ಮಾರಿ ಕೊರೊನಾ ಲಸಿಕೆ ಬಳಕೆಗೆ ಅಧಿಕೃತವಾಗಿ ಒಪ್ಪಿಗೆಯ ಮುದ್ರೆ ಬೀಳಲಿದೆ.
ಜನವರಿ ಮೊದಲೇ ವಾರದಲ್ಲಿ ಕೊರೊನಾ ಲಸಿಕೆ ಸಿಗಲಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುಂಬಾ ವಿಶ್ವಾಸದಲ್ಲಿವೆ. ಹೀಗಾಗಿ ಹೆಮ್ಮಾರಿ ಕೊರೊನಾ ಭಾರತಕ್ಕೆ ಕಾಲಿಟ್ಟ 10 ತಿಂಗಳ ನಂತರ ಸಂಜೀವಿನಿ ರೂಪದಲ್ಲಿ ಲಸಿಕೆ ಸಾರ್ವಜನಿಕ ಬಳಕೆಗೆ ಸಿಗುವ ಸಾಧ್ಯತೆ ಇದೆ.
ಕಳೆದ ಸೋಮವಾರವಷ್ಟೇ ಕೊರೊನಾ ಲಸಿಕೆ ಸಾಗಣೆ ಹಾಗೂ ವಿತರಣೆ ಕುರಿತಂತೆ ನಾಲ್ಕು ರಾಜ್ಯಗಳಲ್ಲಿ ಅಣಕು ಓಟ (ಡ್ರೈ ರನ್)ದ ಯಶಸ್ವಿ ಪ್ರಯೋಗ ನಡೆಸಲಾಗಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel