ಎಲ್‌ಒಸಿ ಕದನ ವಿರಾಮ ಕುರಿತು ಭಾರತ ಪಾಕಿಸ್ತಾನ ಜಂಟಿ ಹೇಳಿಕೆ ಏಕೆ ಮುಖ್ಯವಾಗಿದೆ ?

1 min read

ಎಲ್‌ಒಸಿ ಕದನ ವಿರಾಮ ಕುರಿತು ಭಾರತ ಪಾಕಿಸ್ತಾನ ಜಂಟಿ ಹೇಳಿಕೆ ಏಕೆ ಮುಖ್ಯವಾಗಿದೆ ?

ಹೊಸದಿಲ್ಲಿ, ಫೆಬ್ರವರಿ27: ಫೆಬ್ರವರಿ 24 ರ ಮಧ್ಯರಾತ್ರಿಯಿಂದ (ಬುಧವಾರ) ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಕದನ ವಿರಾಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಪ್ರಾರಂಭಿಸಿದ್ದಾಗಿ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಫೆಬ್ರವರಿ 25 ರಂದು ಪ್ರಕಟಿಸಿವೆ.
India-Pakistan ceasefire
ಫೆಬ್ರವರಿ 22 ರಂದು ತಮ್ಮ ದೂರವಾಣಿ ಹಾಟ್‌ಲೈನ್‌ನಲ್ಲಿ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ಪರಮ್‌ಜಿತ್ ಸಿಂಗ್ ಸಂಘ ಮತ್ತು ಪಾಕಿಸ್ತಾನದ ಲೆಫ್ಟಿನೆಂಟ್ ಮೇಜ್ ಜನರಲ್ ನೌಮನ್ ಜಕಾರಿಯಾ ಅವರ ನಡುವಿನ ಚರ್ಚೆಯ ನಂತರ ಸೈನ್ಯವು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಆಡಿಯೋ ಹೇಳಿಕೆಯಲ್ಲಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭದ್ರತಾ ವ್ಯವಹಾರಗಳ ಸಲಹೆಗಾರ ಮೊಯೀದ್ ಯೂಸುಫ್ ಕದನ ವಿರಾಮವು ತೆರೆಮರೆಯಲ್ಲಿ ನಡೆದ ಮಾತುಕತೆಗಳ ಫಲಿತಾಂಶವಾಗಿದೆ. ಭವಿಷ್ಯದಲ್ಲಿ ಹಿಂಸಾಚಾರಗಳು ಮತ್ತು ‌ಉದ್ವಿಗ್ನತೆಗಳು ಕಡಿಮೆಯಾಗುತ್ತದೆ ಎಂದು ನಿರೀಕ್ಷೆ ಹೊಂದಿರುವುದಾಗಿ ಹೇಳಿದರು.

ಒಪ್ಪಂದದಡಿಯಲ್ಲಿ, ಎರಡೂ ದೇಶಗಳ ಡಿಜಿಎಂಒಗಳು ಗಡಿಗಳಲ್ಲಿ ಪರಸ್ಪರ ಲಾಭದಾಯಕ ಮತ್ತು ಸುಸ್ಥಿರ ಶಾಂತಿಯನ್ನು ಸಾಧಿಸುವ ಹಿತದೃಷ್ಟಿಯಿಂದ ಶಾಂತಿಯನ್ನು ಭಂಗಗೊಳಿಸುವ ಮತ್ತು ಹಿಂಸಾಚಾರಕ್ಕೆ ಕಾರಣವಾಗುವ ಪ್ರವೃತ್ತಿಯನ್ನು ಹೊಂದಿರುವ ಪರಸ್ಪರರ ಪ್ರಮುಖ ಸಮಸ್ಯೆಗಳು ಮತ್ತು ಕಳವಳಗಳನ್ನು ಪರಿಹರಿಸಲು ಒಪ್ಪಿಕೊಂಡರು.

ಕಳೆದ ಮೂರು ತಿಂಗಳಿಂದ ಭಾರತ ಮತ್ತು ಪಾಕಿಸ್ತಾನ ಬ್ಯಾಕ್‌ಚಾನಲ್ ಮಾತುಕತೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿದೆ.
ವರದಿಯ ಪ್ರಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಯೂಸುಫ್‌ರನ್ನು ಮೂರನೇ ದೇಶದಲ್ಲಿ ಭೇಟಿಯಾದರು ಮತ್ತು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರೊಂದಿಗೆ ಸಂವಹನ ಮಾರ್ಗಗಳನ್ನು ತೆರೆದಿಟ್ಟಿದ್ದರು.

2003 ರಿಂದ ಉಭಯ ದೇಶಗಳು ಕದನ ವಿರಾಮ ಒಪ್ಪಂದವನ್ನು ಹೊಂದಿದ್ದರೂ, ಉಲ್ಲಂಘನೆಗಳು ಸಾಮಾನ್ಯವಾಗಿದ್ದವು.

ಗಡಿಯಾಚೆಗಿನ ಭಯೋತ್ಪಾದಕರಿಗೆ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಲು ಪಾಕಿಸ್ತಾನ ಸೇನೆಯು ಕವರ್-ಫೈರ್ ನೀಡುತ್ತಿದೆ ಎಂದು ಭಾರತ ಆರೋಪಿಸಿತ್ತು.

2019 ರ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿ, ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್ ಮತ್ತು ಅದೇ ವರ್ಷದ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಭಾರತದ ನಿರ್ಧಾರದ ನಂತರ ದೇಶಗಳ ನಡುವಿನ ಸಂಬಂಧಗಳು ಇನ್ನಷ್ಟು ಬಿಗಡಾಯಿಸಿದ ನಂತರ ಗಡಿಯಾಚೆಗಿನ ಗುಂಡಿನ ದಾಳಿ ಹೆಚ್ಚು ಗಂಭೀರವಾಯಿತು.

ಫೆಬ್ರವರಿ 2 ರಂದು, ಜನರಲ್ ಬಜ್ವಾ, ಪಾಕಿಸ್ತಾನದ ವಾಯುಪಡೆಯ ಅಕಾಡೆಮಿಗೆ ಭೇಟಿ ನೀಡಿದಾಗ, ನಾವು ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯ ಆದರ್ಶಕ್ಕೆ ದೃಢವಾಗಿ ಬದ್ಧರಾಗಿದ್ದೇವೆ. ಎಲ್ಲಾ ರೀತಿಯಿಂದಲೂ ಶಾಂತಿಯನ್ನು ವಿಸ್ತರಿಸುವ ಸಮಯ ಇದು. ಜಮ್ಮು ಮತ್ತು ಕಾಶ್ಮೀರದ ದೀರ್ಘಕಾಲದ ಸಮಸ್ಯೆಯನ್ನು ಜಮ್ಮು ಕಾಶ್ಮೀರ ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ಗೌರವಾನ್ವಿತ ಮತ್ತು ಶಾಂತಿಯುತವಾಗಿ ಪಾಕಿಸ್ತಾನ ಮತ್ತು ಭಾರತ ಬಗೆಹರಿಸಬೇಕು ಎಂದು ಹೇಳಿದರು.
India-Pakistan ceasefire

ಅಫ್ಘಾನಿಸ್ತಾನದಲ್ಲಿ ಯುದ್ಧ ಮುಗಿಯುತ್ತಿದ್ದಂತೆ ಅಮೆರಿಕದ ನೆರವು ಸಿಗದು ಎಂದು ಅರ್ಥಮಾಡಿಕೊಂಡ ಮತ್ತು ಕಾಶ್ಮೀರ ವಿಷಯದಲ್ಲಿ ಗಲ್ಫ್ ರಾಷ್ಟ್ರಗಳು ನಮ್ಮ ಪರವಾಗಿಲ್ಲ ಎಂಬ ಕಹಿ ಅನುಭವವು ಇಸ್ಲಾಮಿಕ್ ರಾಷ್ಟ್ರವನ್ನು ಭಾರತದೊಂದಿಗೆ ರಾಜಿಯಾಗುವ ನಿರ್ಧಾರ ಕೈಗೊಳ್ಳಲು ‌ಕಾರಣವಾಯಿತು.

ಯುನೈಟೆಡ್ ಸ್ಟೇಟ್ಸ್ ಶ್ವೇತಭವನದ ವಕ್ತಾರ ಜೆನ್ ಸಾಕಿ ಅವರು ಭಾರತ-ಪಾಕ್ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಇದು ದಕ್ಷಿಣ ಏಷ್ಯಾದಲ್ಲಿ ಹೆಚ್ಚಿನ ಶಾಂತಿ ಮತ್ತು ಸ್ಥಿರತೆಯತ್ತ ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd