ಕೊರೊನಾ | ಕಳೆದ 24 ಗಂಟೆಗಳಲ್ಲಿ 28,903 ಹೊಸ ಕೇಸ್ ಪತ್ತೆ

1 min read
Corona

ಕೊರೊನಾ | ಕಳೆದ 24 ಗಂಟೆಗಳಲ್ಲಿ 28,903 ಹೊಸ ಕೇಸ್ ಪತ್ತೆ ( India records over 28,900 new Covid-19 cases)

ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಅಬ್ಬರ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ 28,903 ಹೊಸ ಕೇಸ್ ಪತ್ತೆಯಾಗಿದ್ದು, 188 ಮಂದಿ ಕೊನೆಯುಸಿರೆಳೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 28,903 ಹೊಸ ಕೇಸ್ ಗಳು ಪತ್ತೆಯಾಗಿವೆ.

ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,14,38,734ಕ್ಕೆ ಏರಿಕೆಯಾಗಿದೆ. ಇನ್ನ ಕೊರೊನಾದಿಂದ ಕೊನೆಯುಸಿರೆಳೆದವರ ಸಂಖ್ಯೆ 1,59,044ಕ್ಕೆ ಏರಿಕೆಯಾಗಿದೆ.

Covid-19

ಇನ್ನ ಒಟ್ಟಾರೆ ಒಟ್ಟಾರೆ 1,14,38,734 ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 17,741 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,10,45,284ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇನ್ನೂ 2,34,406 ಸಕ್ರಿಯ ಪ್ರಕರಣಗಳು ಇವೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd