ಮುಂದುವರೆದ ಕೊರೊನಾ ಅಬ್ಬರ : 24 ಗಂಟೇಲಿ 3,498 ಬಲಿ covid19
ನವದೆಹಲಿ : ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಮುಂದುವರೆದಿದ್ದು, ಗುರುವಾರ ಒಂದೇ ದಿನದಲ್ಲಿ 3,86,452 ಪ್ರಕರಣಗಳು ವರದಿಯಾಗಿವೆ.
ಇದೇ ಅವಧಿಯಲ್ಲಿ 3,498 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ.
ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,87,62,976ಕ್ಕೆ ಮೃತರ ಸಂಖ್ಯೆ 2,08,330ಕ್ಕೆ ಏರಿಕೆಯಾಗಿದೆ.
ಇನ್ನು 24 ಗಂಟೆಗಳಲ್ಲಿ 2,97,540 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ 1,53,84,418 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಮನೆ ಸೇರಿದ್ದಾರೆ.
ದೇಶದಲ್ಲಿನ್ನೂ 31,70,228 ಸಕ್ರಿಯ ಪ್ರಕರಣಗಳಿವೆ.










