ಭಾರತದಲ್ಲಿ ಕೊರೊನಾ covid19 ರಣಕೇಕೆ : 4,03,738 ಮಂದಿಗೆ ಸೋಂಕು, 4,092 ಬಲಿ
ನವದೆಹಲಿ : ಭಾರತದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ಮುಂದುವರೆದಿದೆ.
ಹಲವಾರು ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಸೋಂಕು ಮಾತ್ರ ಅತೋಟಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ.
ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 4,03,738 ಮಂದಿಗೆ ಸೋಂಕು ಅಂಟಿದ್ದು, 4,092 ಸೋಂಕಿತರು ಬಲಿಯಾಗಿದ್ದಾರೆ.
ಇದರೊಂದಿಗೆ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 2,22,96,414 ಹಾಗೂ ಮೃತರ ಸಂಖ್ಯೆ 2,42,362ಕ್ಕೆ ಏರಿಕೆಯಾಗಿದೆ.
ನಿನ್ನೆ ಒಂದೇ ದಿನ 3,86,444 ಜನರು ವೈರಸ್ ನಿಂದ ಚೇತರಿಸಿಕೊಂಡಿದ್ದು,
ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ 1,83,17,404ಕ್ಕೆ ಹೇರಿಕೆಯಾಗಿದೆ. ದೇಶದಲ್ಲಿನ್ನೂ 37,36,648 ಸಕ್ರಿಯ ಪ್ರಕರಣಗಳಿವೆ.










