ವಿಶ್ವದಲ್ಲೇ ಇದೇ ಮೊದಲು : ಚರಿತ್ರೆ ಸೃಷ್ಠಿಸಿದ ಕೊರೊನಾ ಸಾವಿನ ಸಂಖ್ಯೆ
ನವದೆಹಲಿ : ದೇಶದಲ್ಲಿ ಕೊರೊನಾ ಅಬ್ಬರ ತಗ್ಗುತ್ತಿದೆ ಎನ್ನುವಾಗಲೇ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಬುಧವಾರ ಒಂದೇ ದಿನ ದೇಶದಲ್ಲಿ ಬರೋಬ್ಬರಿ 6,148 ಮಂದಿ ಹೆಮ್ಮಾರಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.
ಇಡೀ ವಿಶ್ವದ ಯಾವುದೇ ಕೋವಿಡ್ ಪೀಡಿತ ದೇಶಗಳು ಸಹ ದಿನವೊಂದರಲ್ಲಿ ಮೂರು ಸಾವಿರ ಸಾವಿನ ಸಂಖ್ಯೆ ಗಡಿ ಕೂಡ ತಲುಪಿರಲಿಲ್ಲ.
ಈ ದಾಖಲೆಯನ್ನು ನಾಲ್ಕು ಸಾವಿರ ಸಾವಿನೊಂದಿಗೆ ಕಳೆದ ತಿಂಗಳೇ ಮುರಿದಿದ್ದ ಭಾರತ ಇದೀಗ ಆರು ಸಾವಿರ ಜನರ ಬಲಿಯೊಂದಿಗೆ ವಿಶ್ವವನ್ನೇ ನಡುಗಿಸಿದೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 94,052 ಕೇಸ್ ಗಳು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,91,83,121ಕ್ಕೆ ಏರಿಕೆಯಾಗಿದೆ.
6,148 ಮಂದಿ ಸಾವಿನೊಂದಿಗೆ ಸಾವಿನ ಸಂಖ್ಯೆ 3,59,676ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ 1,51,367 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ.
ಈವರರೆಗೂ ದೇಶದಲ್ಲಿ 2,76,55,493 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿನ್ನೂ 11,67,952 ಕೇಸ್ ಗಳು ಸಕ್ರಿಯವಾಗಿದೆ.