71 ದಿನಗಳ ಬಳಿಕ ಭಾರತದಲ್ಲಿ ಅತೀ ಕಡಿಮೆ ಕೊರೊನಾ ಕೇಸ್ ಪತ್ತೆ india
ನವದೆಹಲಿ : ಭಾರತದಲ್ಲಿ ಬರೋಬ್ಬರಿ 71 ದಿನಗಳ ಬಳಿಕ ದಿನವೊಂದರಲ್ಲಿ ಅತೀ ಕಡಿಮೆ ಕೊರೊನಾ ಕೇಸ್ ಗಳು ಪತ್ತೆಯಾಗಿವೆ.
ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 80,834 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 3,303 ರೋಗಿಗಳು ಸಾವನ್ನಪ್ಪಿದ್ದಾರೆ.
ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,94,39,989ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 3,70,384ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 1,32,062 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ.
ಇದರೊಂದಿಗೆ ಈವರೆಗೆ 2,80,43,446 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಸದ್ಯ 10,26,159 ಕೇಸ್ ಗಳು ಮಾತ್ರ ಸಕ್ರಿಯವಾಗಿವೆ.