ಭಾರತದಲ್ಲಿ ಹೊಸ ದಾಖಲೆ ಬರೆದ ’Spider-Man’
ಅಂತರಾಷ್ಟ್ರೀಯ ಮಟ್ಟದಲ್ಲಿ ಸೌಂಡ್ ಮಾಡ್ತಿರೋ ‘Spider -Man: No Way Home’ ಸಿನಿಮಾವು ಭಾರತದಲ್ಲಿ ಹೊಸ ದಾಖಲೆ ಬರೆದಿದೆ.. ಸಿನಿಮಾ ಡಿಸೆಂಬರ್ 16ರಂದು ರಿಲೀಸ್ ಆಗ್ತಿದೆ.. ಆದ್ರೆ ರಿಲೀಸ್ ಗೂ ಮುನ್ನವೇ ಹೊಸ ರೆಕಾರ್ಡ್ ಮಾಡಿದೆ..
ಭಾರತದಲ್ಲಿ ಅತಿ ಹೆಚ್ಚು ಪ್ರೀ ಬುಕಿಂಗ್ ಆದ ಹಾಲಿವುಡ್ ಸಿನಿಮಾವಾಗಿ ಹೊರಹೊಮ್ಮಿದೆ.. ಆದ್ರೆ ಈ ದಾಖಲೆಯಲ್ಲಿ ಈ ಸಿನಿಮಾ 2ನೇ ಸ್ಥಾನವನ್ನ ಪಡೆದಿದೆ.. ಯಾಕಂದ್ರೆ ಮೊದಲ ಸ್ಥಾನದಲ್ಲಿ 2019 ರಲ್ಲಿ ಬಿಡುಗಡೆ ಆಗಿದ್ದ ಮಾರ್ವೆಲ್ ನ ‘Avengers : End Gme’ ಸಿನಿಮಾವಿದೆ..
ಈ ಸಿನಿಮಾ ಭಾರತದಲ್ಲಿ ಅತಿ ಹೆಚ್ಚು ಪ್ರೀ ಬುಕಿಂಗ್ ಆಗಿದ್ದ ಹಾಲಿವುಡ್ ಸಿನಿಮಾ ಎನಿಸಿಕೊಂಡಿತ್ತು. ಅದರ ಬಳಿಕ ಇದೀಗ ‘Spideran; No Way Home’ ಸಿನಿಮಾ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಡಿಸೆಂಬರ್ 16 ರಂದು ಸಿನಿಮಾ ಬಿಡುಗಡೆ ಆಗಲಿದ್ದು, ನಿನ್ನೆಯಿಂದಲೇ ಸಿನಿಮಾದ ಟಿಕೆಟ್ ಬುಕಿಂಗ್ ಓಪನ್ ಆರಂಭವಾಗಿದೆ.. ಈಗಾಗಲೇ ಸಿನಿಮಾದ 5 ಲಕ್ಷಕ್ಕೂ ಹೆಚ್ಚು ಟಿಕೆಟ್ ಗಳು ಮಾರಾಟವಾಗಿವೆ. 24 ಗಂಟೆಯಲ್ಲಿ ಮಾರಾಟವಾಗಿರುವ ಟಿಕೆಟ್ನಿಂದ ಸುಮಾರು 10 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.
ಅಂದ್ಹಾಗೆ 2019 ರಲ್ಲಿ ಬಿಡುಗಡೆ ಆಗಿದ್ದ ಮಾರ್ವೆಲ್ನ ‘ಅವೇಂಜರ್ಸ್; ಎಂಡ್ ಗೇಮ್’ ಸಿನಿಮಾದ ಒಟ್ಟು 14 ಲಕ್ಷ ಟಿಕೆಟ್ಗಳು ಮೊದಲ 24 ಗಂಟೆಯಲ್ಲಿ ಮಾರಾಟವಾಗಿದ್ದವು. ಇದು ಈವರೆಗಿನ ದಾಖಲೆ ಆಗಿದೆ. ಈ ಸಿನಿಮಾ ಸ್ಪೈಡರ್ ಮ್ಯಾನ್ ಸರಣಿಯದ್ದಾಗಿದೆ.. ಅಲ್ಲದೇ ಇದು ಟಾಮ್ ಹಾಲೆಂಡ್ನ ಕೊನೆಯ ಸ್ಪೈಡರ್ ಮ್ಯಾನ್ ಸಿನಿಮಾ ಎಂದೂ ಕೂಡ ಹೇಳಲಾಗ್ತಿದೆ..
ಅಂದ್ಹಾಗೆ ಸ್ಪೈಡರ್ ಮ್ಯಾನ್; ನೋ ವೇ ಹೋಮ್ ಸಿನಿಮಾ ಡಿಸೆಂಬರ್ 13 ರಂದು ಲಾಸ್ ಏಂಜಲ್ಸ್ನಲ್ಲಿ ಬಿಡುಗಡೆ ಆಗಿದೆ. ಬ್ರಿಟನ್ನಲ್ಲಿ ಡಿಸೆಂಬರ್ 15 ಕ್ಕೆ ಬಿಡುಗಡೆ ಆಗಲಿದೆ. ಭಾರತದಲ್ಲಿ ಡಿಸೆಂಬರ್ 16ಕ್ಕೆ ಬಿಡುಗಡೆ ಆಗಲಿದೆ.