T20 World Cup 2022: T20 ವಿಶ್ವಕಪ್ ಗೆ ಟೀಮ್ ಇಂಡಿಯಾ ತಂಡ ಪ್ರಕಟ…..
ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ. ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಹರ್ಷಲ್ ಪಟೇಲ್ ಮತ್ತು ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ. ಇನ್ನುಳಿದಂತೆ ಯಾವುದೇ ಅಚ್ಚರಿ ಆಯ್ಕೆಗಳಿಲ್ಲದೆ 15 ಸದಸ್ಯರನ್ನೊಳಗೊಂಡ ತಂಡವನ್ನ ಪ್ರಕಟಿಸಲಾಗಿದೆ.
ಆದ್ರೆ ದೀಪಕ್ ಹೂಡಾ, ಆರ್ಶಾದೀಪ್ ಸಿಂಗ್ 15ರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ತಂಡದಲ್ಲಿ ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ಅಕ್ಷರ್ ಪಟೇಲ್, ಆರ್. ಅಶ್ವಿನ್ ಅವರು ಆಲ್ ರೌಂಡರ್ ಜಾಗದಲ್ಲಿ ಕಾಣಿಸಿಕೊಂಡಿದ್ದಾರೆ. ಯುಜುವೇಂದ್ರ ಚಾಹಲ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿದ್ದಾರೆ. ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬೂಮ್ರಾ ಮತ್ತು ಆರ್ಶಾದೀಪ್ ಸಿಂಗ್ ವೇಗದ ಬೌಲಿಂಗ್ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಇನ್ನು ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಆರಂಭಿಕರು ಹಾಗೂ ನಾಯಕ ಮತ್ತು ಉಪನಾಯಕರು. ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಜೊತೆಗೆ ಮ್ಯಾಚ್ ಫಿನಿಶರ್ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ.
ರೋಹಿತ್ ಶರ್ಮಾ (ನಾಯಕ),
ಕೆ.ಎಲ್. ರಾಹುಲ್ (ಉಪನಾಯಕ)
ವಿರಾಟ್ ಕೊಹ್ಲಿ
ಸೂರ್ಯ ಕುಮಾರ್ ಯಾದವ್
ರಿಷಬ್ ಪಂತ್ (ವಿಕೆಟ್ ಕೀಪರ್)
ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
ಹಾರ್ದಿಕ್ ಪಾಂಡ್ಯ
ದೀಪಕ್ ಹೂಡಾ
ಅಕ್ಷರ್ ಪಟೇಲ್
ಆರ್. ಅಶ್ವಿನ್
ಯುಜುವೇಂದ್ರ ಚಾಹಲ್
ಜಸ್ಪ್ರಿತ್ ಬೂಮ್ರಾ
ಭುವನೇಶ್ವರ್ ಕುಮಾರ್
ಹರ್ಷೆಲ್ ಪಟೇಲ್
ಆರ್ಶಾದೀಪ್ ಸಿಂಗ್
ಹೆಚ್ಚುವರಿ ಆಟಗಾರರು- ಮಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿಬಿಷ್ಣೋಯ್, ದೀಪಕ್ ಚಾಹರ್
ವಿಶ್ವಕಪ್ಗೂ ಮುನ್ನ ಟೀಂ ಇಂಡಿಯಾ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಬೇಕಿದೆ. ಈ ಎರಡೂ ಸರಣಿಗಳಿಗೆ ಭಾರತ ತಂಡವನ್ನೂ ಪ್ರಕಟಿಸಲಾಗಿದೆ.








