laneಲಂಡನ್ ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳ ಸೇವೆ ಸ್ಥಗಿತ..!
ಬ್ರಿಟನ್ , ಇಟಲಿ ಹಾಗೂ ಕೆಲ ಯೂರೋಪ್ ದೇಶಗಳಲ್ಲಿ ನೂತನ ಸ್ವರೂಪದ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಅನೇಕ ದೇಶಗಳು ಬ್ರಿಟನ್ ಸೇರಿ ಇತರೇ ದೇಶಗಳಿಗೆ ವಿಮಾನ ಸೇವೆ ಸ್ಥಗಿತಗೊಳಿಸಿವೆ. ಇತ್ತ ಭಾರತವೂ ಈ ಬಗ್ಗೆ ಕಟ್ಟೆಚ್ಚರ ವಹಿಸಿದೆ. ಹೀಗಾಗಿಯೇ ಮುಂಜಾಗ್ರತಾ ಕ್ರಮವಾಗಿ ಲಂಡನ್ ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳ ಹಾರಾಟವನ್ನು ಕೇಂದ್ರ ಸರ್ಕಾರ ಇದೇ ಡಿಸೆಂಬರ್ 22ರಿಂದ ಡಿಸೆಂಬರ್ 31ರ ತನಕ ರದ್ದು ಮಾಡಿ ಆದೇಶಹೊರಡಿಸಿದೆ.
ಮಾಸ್ತಿಫ್ ಬಲಿಷ್ಠ ಶ್ವಾನ ತಳಿಗಳು : ಈ ಶ್ವಾನಗಳ ಬಗ್ಗೆ ನಿಮಗೆಷ್ಟು ಗೊತ್ತು?
ಯುಕೆಯಿಂದ ಭಾರತಕ್ಕೆ ಬರುವ ವಿಮಾನಗಳ ಹಾರಾಟವನ್ನು ಡಿಸೆಂಬರ್ 22ರಿಂದ 31ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಅಂತ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಇನ್ನೂ ಈ ತಿಂಗಳ ಅಂತ್ಯ ಅಂದ್ರೆ ಡಿಸೆಂಬರ್ 31 ರವರೆಗೂ ಸಹ ವಿಮಾನ ಸೇವೆ ಸ್ಥಗಿತಗೊ:ಳಿಸಲಾಗಿದೆ. ಇನ್ನೂ ಹೊಸ ಸ್ವರೂಪದ ಕೊರೊನಾ ವೈರಸ್ ನಿಂದ ಜನರು ಆತಂಕಕ್ಕೆ ಒಳಗಾಗೋದು ಬೇಡ. ಸೋಂಕು ತಡೆಯಲು ಎಲ್ಲಾ ರೀತಿಯಾದ ಕಟ್ಟೆಚ್ಚರ ವಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರಾದ ಹರ್ಷ ವರ್ಧನ್ ಅವರು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








