India Vs Bangladesh: ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ / 73 ರನ್ ಗೆ 1 ವಿಕೆಟ್…
ಭಾರತ-ಬಾಂಗ್ಲಾದೇಶ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಶನಿವಾರ ಚಿತ್ತಗಾಂಗ್‌ನಲ್ಲಿ ನಡೆಯುತ್ತಿದೆ. ಬಾಂಗ್ಲಾದೇಶ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ ತಂಡ 13 ಓವರ್ ಗಳಲ್ಲಿ ಒಂದು ವಿಕೆಟ್ ಗೆ 73 ರನ್ ಗಳಿಸಿದೆ. ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ. ಶಿಖರ್ ಧವನ್ 3 ರನ್ ಗಳಿಸಿದ್ದಾಗ ಮೆಹದಿ ಹಸನ್ ಮಿರಾಜ್ ಅವರನ್ನ ಎಲ್ ಬಿಡಬ್ಲ್ಯೂ ಬಲೆಗೆ ಬೀಳಿಸಿದ್ದಾರೆ.
ಟೀಂ ಇಂಡಿಯಾ ಸತತ ನಾಲ್ಕನೇ ಪಂದ್ಯದಲ್ಲಿ ಆರಂಭಿಕ ಜೋಡಿಯನ್ನ ಬದಲಾಯಿಸಿದೆ. ಇಶಾನ್ ಕಿಶಾನ್ ಮತ್ತು ಶಿಖರ್ ಧವನ್ ಓಪನಿಂಗ್ ಇಳಿದಿದ್ದಾರೆ. ಗಾಯಗೊಂಡಿರುವ ನಾಯಕ ರೋಹಿತ್ ಬದಲಿಗೆ ಇಶಾನ್ ಕಣಕ್ಕಿಳಿದಿದ್ದಾರೆ. ದೀಪಕ್ ಚಾಹರ್ ಗಾಯದಿಂದ ಹೊರಗುಳಿದಿದ್ದು, ಇವರ ಬದಲಿಗೆ ಕುಲದೀಪ್ ಅವಕಾಶ ಪಡೆದಿದ್ದಾರೆ.
ಬಾಂಗ್ಲಾದೇಶ ಕೂಡ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದು, ನಜ್ಮುಲ್ ಹಸನ್ ಶಾಂಟೊ ಮತ್ತು ನಸುಮ್‌ನ ಜಗ್ ತಸ್ಕಿನ್ ಬದಲಿಗೆ ಯಾಸಿರ್ ಅಲಿ ಅವರನ್ನು ಆಯ್ಕೆ ಮಾಡಲಾಗಿದೆ.
ಎರಡೂ ತಂಡಗಳ ಪ್ಲೇಯಿಂಗ್-11 ಈ ರೀತಿ ಇದೆ….
ಬಾಂಗ್ಲಾದೇಶ: ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್, ಯಾಸಿರ್ ಅಲಿ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್ ಮತ್ತು ಇಬಾದತ್ ಹೊಸೈನ್.
ಭಾರತ: ಕೆಎಲ್ ರಾಹುಲ್ (ನಾಯಕ), ಇಶಾನ್ ಕಿಶನ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್.
India Vs Bangladesh: India lost the toss and went down to bat / 1 wicket for 73 runs…








