India vs England : ಇಂಗ್ಲೆಂಡ್ ಗೆ 169 ರನ್ ಟಾರ್ಗೇಟ್ – ಇಂಗ್ಲೆಂಡ್ 52 ರನ್ 5 ಓವರ್
ಅಡಿಲೇಡ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ನಡೆಸಿತು. ಭಾರತ 169 ರನ್ ಗಳ ಗುರಿ ನೀಡಿದೆ.
ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಲ್ಲಿ ಪೈಕಿ ವಿರಾಟ್ ಕೊಹ್ಲಿ ಮಾತ್ರ ಉತ್ತಮ ಪ್ರದರ್ಶನ ನೀಡಿದರು. ನೆಚ್ಚಿನ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಅರ್ಧಶತಕ ಗಳಿಸಿ ಹಾರ್ದಿಕ್ ಜೊತೆ 61 ರನ್ ಜೊತೆಯಾಟ ಕಟ್ಟಿದರು. ಹಾರ್ದಿಕ್ ಕೂಡ ಭರ್ಜರಿ ಅರ್ಧಶತಕ ಬಾರಿಸಿದರು.
ಗುರಿ ಬೆನ್ನತ್ತಿದ ಇಂಗ್ಲೆಂಡ್ 1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿದೆ.
ಹಾರ್ದಿಕ್ ಪವರ್ ಪ್ಲೇ
ವಿರಾಟ್ ಕೊಹ್ಲಿ ಔಟಾದ ನಂತರ ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ನಡೆಸಿದರು. 33 ಎಸೆತಗಳಲ್ಲಿ 63 ರನ್ ಗಳಿಸಿದರು. ಸ್ಟ್ರೈಕ್ ರೇಟ್ 190. ಒಂದು ಹಂತದಲ್ಲಿ 150 ಕ್ಕಿಂತ ಕಡಿಮೆ ಮೊತ್ತದಲ್ಲಿ ಕುಗ್ಗುತ್ತಿರುವಂತೆ ಕಾಣುತ್ತಿದ್ದ ಭಾರತ 168 ರನ್ ಗಳಿಗೆ ತಲುಪಿತ್ತು. 4 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನ ಬಾರಿಸಿದರು.
India vs England: 169 runs target for England – England 52 runs in 5 overs








