ಭಾರತ -ಇಂಗ್ಲೆಂಡ್ 2ನೇ ಟಿ-ಟ್ವೆಂಟಿ – ಧವನ್ ಬದಲು ರೋಹಿತ್ ? ಟೀಮ್ ಇಂಡಿಯಾದ ಹನ್ನೊಂದರ ಲೆಕ್ಕಚಾರ..!

1 min read
virat kohli team india t-20 cricket

ಭಾರತ -ಇಂಗ್ಲೆಂಡ್ 2ನೇ ಟಿ-ಟ್ವೆಂಟಿ – ಧವನ್ ಬದಲು ರೋಹಿತ್ ? ಟೀಮ್ ಇಂಡಿಯಾದ ಹನ್ನೊಂದರ ಲೆಕ್ಕಚಾರ..!

India vs England, 2nd T20 Preview

team india saakshatvಭಾರತ ಮತ್ತು ಇಂಗ್ಲೆಂಡ್ ನಡುವಿ ಎರಡನೇ ಟಿ-ಟ್ವೆಂಟಿ ಪಂದ್ಯ ಮಾರ್ಚ್ 14 ಭಾನುವಾರ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈಗಾಗಲೇ ಮೊದಲ ಟಿ-ಟ್ವೆಂಟಿ ಪಂದ್ಯವನ್ನು ಸೋತಿರುವ ಟೀಮ್ ಇಂಡಿಯಾ ಕೊಂಚ ಮಟ್ಟಿನ ಒತ್ತಡದಲ್ಲಿದೆ. ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಹಾಗೇ ಟೀಮ್ ಇಂಡಿಯಾದ ಬೌಲಿಂಗ್ ದಾಳಿಯನ್ನು ಇಂಗ್ಲೀಷ್ ಬ್ಯಾಟ್ಸ್ ಮೆನ್ ಗಳು ಕ್ಯಾರೇ ಮಾಡಿರಲಿಲ್ಲ. ಹೀಗಾಗಿ ಮೊದಲ ಪಂದ್ಯವನ್ನು ಗೆದ್ದಿರುವ ಇಂಗ್ಲೆಂಡ್ ತಂಡ ಸರಣಿ ಗೆಲ್ಲುವ ಉಮೇದಿನಲ್ಲಿದ್ರೆ, ಟೀಮ್ ಇಂಡಿಯಾ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಹೋರಾಟ ನಡೆಸಬೇಕಿದೆ.
ಇನ್ನು ಟೀಮ್ ಇಂಡಿಯಾದ ಹನ್ನೊಂದರ ಬಳಗದ ಆಯ್ಕೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೊದಲ ಪಂದ್ಯಕ್ಕೆ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಿರುವ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಟೀಕೆಗಳನ್ನು ಎದುರಿಸಬೇಕಾಯ್ತು. ಇದ್ರಿಂದ ಎರಡನೇ ಪಂದ್ಯಕ್ಕೆ ಧವನ್ ಬದಲು ರೋಹಿತ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಎರಡು ಪಂದ್ಯಗಳಿಗೆ ವಿಶ್ರಾಂತಿ ಅಂತ ರೋಹಿತ್ ಗೆ ಹೇಳಿರುವುದರಿಂದ ಮತ್ತೆ ಧವನ್ ಗೆ ಅವಕಾಶವನ್ನು ಕಲ್ಪಿಸಲೂ ಬಹುದು.
ಇನ್ನೊಂದೆಡೆ ಕೆ.ಎಲ್. ರಾಹುಲ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ಒಂದು ವೇಳೆ ಅವಕಾಶವನ್ನು ಕಳೆದುಕೊಂಡ್ರೆ ರಾಹುಲ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಕಷ್ಟ. ಹಾಗೇ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಲಯವನ್ನು ಕಳೆದುಕೊಂಡಿದ್ದಾರೆ. ಇದು ತಂಡದ ಮೇಲೆ ಭಾರಿ ಪರಿಣಾಮವನ್ನು ಬೀರುತ್ತಿದೆ.

India vs England 2nd T20
team india icc ranking saakshatvಮತ್ತೊಂದೆಡೆ ಟೀಮ್ ಇಂಡಿಯಾದ ಅಡ್ಡದಿಡ್ಡಿ ಬ್ಯಾಟ್ಸ್ ಮೆನ್ ರಿಷಬ್ ಪಂತ್ ಸ್ವಲ್ಪ ಮಟ್ಟಿನ ತಾಳ್ಮೆಯನ್ನು ಕಾಯ್ದುಕೊಂಡ್ರೆ, ಎದುರಾಳಿ ತಂಡಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಅಷ್ಟೇ ಅಲ್ಲ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ತನ್ನ ಜವಾಬ್ದಾರಿಯನ್ನು ಸರಿಯಾಗಿಯೇ ನಿಭಾಯಿಸುತ್ತಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಶಾರ್ದೂಲ್ ಥಾಕೂರ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ. ಆಲ್ ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಸಮರ್ಥವಾಗಿ ನಿಭಾಯಿಸಬೇಕಿದೆ.
ಸದ್ಯ ಇಂಗ್ಲೆಂಡ್ ತಂಡದಲ್ಲಿ ಯಾವುದೇ ತೊಂದರೆ ಇಲ್ಲ. ಜೇಸನ್ ರಾಯ್, ಜೋಸ್ ಬಟ್ಲರ್, ಡೇವಿಡ್ ಮಲಾನ್, ಜಾನಿ ಬೇರ್ ಸ್ಟೋವ್, ಬೆನ್ ಸ್ಟೋಕ್ಸ್, ಇಯಾನ್ ಮೊರ್ಗಾನ್ ಟೀಮ್ ಇಂಡಿಯಾ ಬೌಲರ್ ಗಳಿಗೆ ಸಿಂಹಸ್ವಪ್ನರಾಗಿ ಕಾಡುವ ಸಾಮಥ್ರ್ಯ ಹೊಂದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜೋಫ್ರಾ ಆರ್ಚೆರ್, ಮಾರ್ಕ್ ವುಡ್, ಕ್ರಿಸ್ ಜೋರ್ಡಾನ್ ವೇಗದ ಅಸ್ತ್ರಗಳಾದ್ರೆ, ಆದೀಲ್ ರಶೀದ್ ಸ್ಪಿನ್ ಮ್ಯಾಜಿಕ್ ಮಾಡಲಿದ್ದಾರೆ. ಇನ್ನು ಸ್ಯಾಮ್ ಕುರನ್ ಮತ್ತು ಮೋಯಿನ್ ಆಲಿ ನಡುವೆ ಹನ್ನೊಂದರ ಬಳಗವನ್ನು ಯಾರು ಸೇರಿಕೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ಒಟ್ಟಿನಲ್ಲಿ ಸೂಪರ್ ಸಂಡೇ ಸೂಪರ್ ಮ್ಯಾಚ್ ನಲ್ಲಿ ಯಾರು ಗೆಲ್ತಾರೆ, ಟಿ-ಟ್ವೆಂಟಿ ಪಂದ್ಯ ರೋಚಕತೆಯನ್ನು ಸವಿಯಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
team india saakshatvಟೀಮ್ ಇಂಡಿಯಾ
ವಿರಾಟ್ ಕೊಹ್ಲಿ (ನಾಯಕ) ರೋಹಿತ್ ಶರ್ಮಾ/ಶಿಖರ್ ಧವನ್, ಕೆ.ಎಲ್. ರಾಹುಲ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಥಾಕೂರ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್.

ಇಂಗ್ಲೆಂಡ್
ಇಯಾನ್ ಮೊರ್ಗಾನ್ (ನಾಯಕ), ಜೇಸನ್ ರಾಯ್, ಜೋಸ್ ಬಟ್ಲರ್, ಡೇವಿಡ್ ಮಲಾನ್, ಜೋನಿ ಬೇರ್ ಸ್ಟೋವ್, ಬೆನ್ ಸ್ಟೋಕ್ಸ್, ಸ್ಯಾಮ್ ಕುರನ್/ ಮೊಯಿನ್ ಆಲಿ, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚೆರ್, ಮಾರ್ಕ್ ವುಡ್, ಆದಿಲ್ ರಶೀದ್.

#India vs England 2nd T20 #team india #viratkohli #rohithsharma #bcci #cricket

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd