ಬ್ಯಾಟ್ಸ್ ಮೆನ್ಸ್ ಕೆಚ್ಚೆದೆಯ ಪ್ರದರ್ಶನ : 4ನೇ ಟೆಸ್ಟ್ ನಲ್ಲಿ ಭಾರತ ಜಬರ್ದಸ್ತ್ ಆಟ..!
ಲಂಡನ್ : ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ. ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಕಂಬ್ಯಾಕ್ ಮಾಡಿರುವ ಟೀಂ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ ರೋಹಿತ್ ಶರ್ಮಾ ಆಕರ್ಷಕ ಶತಕ, ಪೂಜಾರಾ ಅರ್ಧಶತಕದ ನೆರವಿನಿಂದ 270 ರನ್ ಗಳಿಸಿದೆ.
43 ರನ್ ಗಳಿಗೆ ವಿಕೆಟ್ ನಷ್ಟವಿಲ್ಲದೇ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಪರ ರೋಹಿತ್ ಹಾಗೂ ರಾಹುಲ್ ಉತ್ತಮವಾಗಿ ಬ್ಯಾಟ್ ಬೀಸಿದರು.
ಈ ಜೋಡಿ 83ರನ್ ಗಳ ಮುರಿಯದ ಜೊತೆಯಾಟವಾಡಿತು. ಈ ಹಂತದಲ್ಲಿ 46 ರನ್ ಗಳಿಸಿದ್ದ ರಾಹುಲ್ ಆಂಡರ್ಸನ್ ಓವರ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಈ ಬಳಿಕ ರೋಹಿತ್ ಜೊತೆಗೂಡಿದ ಪೂಜಾರಾ ತಮ್ಮ ನೈಜವಾಟವಲ್ಲದೇ ಏಕದಿನ ಮಾದರಿಯ ಆಟಕ್ಕೆ ಮುಂದಾದರು.
ಈ ಜೋಡಿ 153ರನ್ ಗಳ ಉತ್ತಮ ಜೊತೆಯಾಟವಾಡಿ, ಆಂಗ್ಲರ ಬೌಲರ್ ಗಳನ್ನ ದಂಡಿಸಿದರು.
ಈ ಹಂತದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ಮಿಂಚಿದರು. ಇದು 8 ವರ್ಷಗಳ ರೋಹಿತ್ ಶರ್ಮಾ ಅವರ ಟೆಸ್ಟ್ ಕೆರಿಯರ್ ನಲ್ಲಿ ವಿದೇಶಿ ನೆಲದಲ್ಲಿ ಸಿಡಿಸಿರುವ ಮೊದಲ ಶತಕ ಇದಾಗಿದೆ.
ಇದಾದ ಬಳಿಕ ರಾಬಿನ್ಸನ್ ಓವರ್ ನಲ್ಲಿ ಉತ್ತಮವಾಗಿ ಆಟವಾಡುತ್ತಿದ್ದ ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರಾ ಔಟ್ ಆದರು.
ಸದ್ಯ ಕ್ರೀಸ್ ನಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಜೇಯ(22ರನ್?) ಹಾಗೂ ರವೀಂದ್ರ ಜಡೇಜಾ ಅಜೇಯ(9)ರನ್ ಗಳಿಸಿ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
ಸದ್ಯ ಟೀಂ ಇಂಡಿಯಾ 171ರನ್ ಗಳ ಮುನ್ನಡೆ ಸಾಧಿಸಿದೆ.