ಮೋದಿ ಗ್ರೌಂಡ್ ನಲ್ಲಿ ಟೀಂ ಇಂಡಿಯಾಗೆ ಇಂಗ್ಲೆಂಡ್ ನಮೋ ನಮೋ..!

1 min read
India

ಮೋದಿ ಗ್ರೌಂಡ್ ನಲ್ಲಿ ಟೀಂ ಇಂಡಿಯಾಗೆ ಇಂಗ್ಲೆಂಡ್ ನಮೋ ನಮೋ..!

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾತರ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ, ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಕೇಕೆ ಹಾಕಿದೆ.

ಇಂಗ್ಲೆಂಡ್ ವಿರುದ್ಧ ಕೊಹ್ಲಿ ಹುಡುಗರು ಇನ್ನಿಂಗ್ಸ್ ಹಾಗೂ 25 ರನ್ ಗಳಿಂದ ಭರ್ಜರಿ ಜಯ ಸಾಧಿಸಿ ದಾಖಲೆ ಬರೆದಿದ್ದಾರೆ. ಜೊತೆಗೆ ಸರಣಿಯನ್ನೂ ವಶಪಡಿಸಿಕೊಂಡಿದೆ.

ತಂಡ 259ಕ್ಕೆ 7 ವಿಕೆಟ್ ಕಳೆದುಕೊಂಡಿದ್ದಾಗಿನಿಂದ ಮೂರನೇ ದಿನದಾಟ ಆರಂಭಿಸಿದ ವಾಷಿಂಗ್ ಟನ್ ಸುಂದರ್, ಅಕ್ಷರ್ ಪಟೇಲ್, ಇಂಗ್ಲೆಂಡ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ರು.India

ಈ ಜೋಡಿಯ ಶತಕದಾಟದ ನೆರವಿನಿಂದ ಭಾರತ 350 ರನ್ ಗಳ ಗಡಿದಾಟಿತು. ಅಕ್ಷರ್ ಪಟೇಲ್ 43 ರನ್ ಗಳಿಸಿದ್ರೆ, ಇಶಾಂತ್, ಸಿರಾಜ್ ಶೂನ್ಯಕ್ಕೆ ಔಟ್ ಆದ್ರು.

ಇನ್ನೊಂದೆಡೆ ಚೊಚ್ಚಲ ಶತಕದ ನಿರೀಕ್ಷೆಯಲ್ಲಿದ್ದ ವಾಷಿಂಗ್ ಟನ್ ಸುಂದರ್ 96 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಅಂತಿಮವಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 365 ರನ್ ಗೆ ಆಲೌಟ್ ಆಯ್ತು.

ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಗೆ ಅಕ್ಷರ್ ಪಟೇಲ್ ಶಾಕ್ ನೀಡಿದ್ರು. 2 ರನ್ ಗಳಿಸಿದ್ದ ಸಿಬ್ಲಿಯನ್ನ 3 ರನ್ ಗಳಿಗೆ ಔಟ್ ಮಾಡಿದ್ರು.

ಇದಾದ ಕೆಲವೇ ಕ್ಷಣಗಳಲ್ಲಿ ಅಶ್ವಿನ್ ಜಾಕ್ ಕ್ರಾಲೆಗೆ ಪೆವಿಲಿಯನ್ ದಾರಿ ತೋರಿಸಿದ್ರು. ಇದಾದ ಬಳಿಕ ಜೋನಿ ಬೇರ್ ಸ್ಟೋವ್, ರೂಟ್ ಅಶ್ವಿನ್ ದಾಳಿಗೆ ತಲೆಬಾಗಿದ್ರು. ಇಂಗ್ಲೆಂಡ್ ಪರ ಡೇನಿಯಲ್ ಲಾರೆನ್ಸ್ 50 ರನ್ ಗಳಿಸಿದ್ದು ಬಿಟ್ಟರೇ ಬೇರ್ಯಾವ ಆಟಗಾರನೂ ಪ್ರತಿರೋಧ ತೋರಲೇ ಇಲ್ಲ.

ಅಂತಿಮವಾಗಿ ಇಂಗ್ಲೆಂಡ್ 135ಕ್ಕೆ ಸರ್ವಪತನಗೊಂಡಿತು. ಇದರೊಂದಿಗೆ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 25 ರನ್ ಗಳೊಂದಿಗೆ ಪಂದ್ಯ ಗೆದ್ದುಕೊಳ್ತು. ಜೊತೆಗೆ ನಾಲ್ಕು ಪಂದ್ಯಗಳ ಸರಣಿಯನ್ನ 3-1 ರ ಅಂತರದೊಂದಿಗೆ ಗೆದ್ದುಕೊಂಡಿದೆ.

ಭಾರತದ ಪರ ಅಕ್ಷರ್ ಪಟೇಲ್ 5, ಅಶ್ವಿನ್ ವಿಕೆಟ್ ಪಡೆದು ಮಿಂಚಿದ್ರು.

 

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd