ಸರಣಿ ಗೆಲುವಿನ ಕನಸು ಭಗ್ನ – 2-2 ರಿಂದ ಸಮಬಲ…..
15 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಭಗ್ನಗೊಂಡಿದೆ. ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾವನ್ನು ಇಂಗ್ಲೆಂಡ್ 7 ವಿಕೆಟ್‌ಗಳಿಂದ ಸೋಲಿಸಿದೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ಜೋ ರೂಟ್ (142*) ಮತ್ತು ಜಾನಿ ಬೈರ್‌ಸ್ಟೋವ್ (114*) ಅವರ ನಾಲ್ಕನೇ ವಿಕೆಟ್‌ಗೆ 269 ರನ್‌ಗಳ ಜೊತೆಯಾಟದಿಂದಾಗಿ ಇಂಗ್ಲೆಂಡ್ ಮೂರು ವಿಕೆಟ್‌ಗಳ ನಷ್ಟಕ್ಕೆ 378 ರನ್‌ಗಳ ಗುರಿಯನ್ನು ಸಾಧಿಸಿತು. ಇದರೊಂದಿಗೆ ಐದು ಟೆಸ್ಟ್‌ಗಳ ಸರಣಿ 2-2ರಲ್ಲಿ ಸಮಬಲಗೊಂಡಿದೆ. ಭಾರತ ಎದುರಾಳಿ ತಂಡಕ್ಕೆ 350ಕ್ಕೂ ಹೆಚ್ಚು ರನ್‌ಗಳ ಗುರಿ ನೀಡಿ ನಂತರವೂ ಪಂದ್ಯ ಸೋತಿದ್ದು ಇದೇ ಮೊದಲು.
ಅಬ್ಬರಿಸಿದ ಜೋ ರೂಟ್
ಜೋ ರೂಟ್ ಐದನೇ ದಿನದಂದು ತಮ್ಮ ಟೆಸ್ಟ್ ವೃತ್ತಿಜೀವನದ 28 ನೇ ಶತಕವನ್ನು ಗಳಿಸಿದರು. 2021 ರ ನಂತರ, ಈ ಇಂಗ್ಲೆಂಡ್ ಬ್ಯಾಟ್ಸ್‌ಮನ್ 47 ಇನ್ನಿಂಗ್ಸ್‌ಗಳಲ್ಲಿ 11 ಶತಕಗಳನ್ನು ಗಳಿಸಿದ್ದಾರೆ. ಭಾರತದ ವಿರುದ್ಧ ರೂಟ್ 9ನೇ ಶತಕ ಸಿಡಿಸಿದ್ದರು.
ಭಾರತ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ 245 ರನ್ ಗಳಿಗೆ ಆಲೌಟ್ ಆಗಿದ್ದು, ಇಂಗ್ಲೆಂಡ್ ಗೆ 378 ರನ್ ಟಾರ್ಗೆಟ್ ಸಿಕ್ಕಿತ್ತು. ಗುರಿ ದೊಡ್ಡದಾಗಿದೆ ಎನಿಸಿದರೂ ಕೂಡ ಜಾನಿ ಬೈರ್ಸ್ಟೋವ್ ಮತ್ತು ಜೋ ರೂಟ್ ಜೊತೆಯಾಡ ಇಡೀ ಪಂದ್ಯದ ಚಿತ್ರಣವನ್ನೆ ಬದಲಾಯಿಸಿದರು..
India vs England Edgbaston Test The dream of winning the series is shattered