INDvsPAK : ಇಂಡೋ – ಪಾಕ್ ಕಾಳಗ ಅಂದ್ರೆ ಸುಮ್ನೇನಾ..? india-vs-pakistan-match-tickets-sold-out saaksha tv
ಭಾರತ-ಪಾಕ್ ತಂಡಗಳ ಮಧ್ಯೆ ಮೆಲ್ಬೋರ್ನ್ ವೇದಿಕೆಯಲ್ಲಿ ಈ ವರ್ಷ ಅಕ್ಟೋಬರ್ 23 ರಂದು ನಡೆಯಲಿರುವ ಟಿ20 ವಿಶ್ವಕಪ್ ಟಗ್ ಆಫ್ ವಾರ್ ಫೈಟ್ಗಾಗಿ ಇಂದಿನಿಂದಲೇ ಸಿದ್ಧತೆ ಶುರುವಾಗಿದೆ.
ಟೂರ್ನಿ ಆರಂಭಕ್ಕೆ ಇನ್ನೂ 8 ತಿಂಗಳು ಸಮಯ ಬಾಕಿ ಇದೆ. ದಾಯಾದಿಗಳ ಸಮರವನ್ನು ನೋಡಲು ಅಭಿಮಾನಿಗಳು ಕಾದುಕುಳಿತಿದ್ದಾರೆ.
ಕೇವಲ ಒಂದು ಗಂಟೆಯ ಅವಧಿಯಲ್ಲಿ ಅನ್ ಲೈನ್ ನಲ್ಲಿ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.
ಅಂದಹಾಗೆ 2021ರಲ್ಲಿ ನಡೆದ ಟಿ 20 ವಿಶ್ವಕಪ್ನಲ್ಲೂ ಭಾರತ್-ಪಾಕ್ ಪಂದ್ಯದ ಟಿಕೆಟ್ಗಳು ಇದೇ ಮಾದರಿಯಲ್ಲಿ ಸೋಲ್ಡ್ ಔಟ್ ಆಗಿತ್ತು.
ಆದ್ರೆ ಆ ಪಂದ್ಯವನ್ನು ನೋಡಿದ, ಟೀಂ ಇಂಡಿಯಾ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದರು.
ಇದು ಹೀಗಿದ್ದರೇ ಆಸ್ಟ್ರೇಲಿಯಾ ವೇದಿಕೆಯಾಗಿ ನಡೆಯಲಿರುವ 2022ರ ವಿಶ್ವಕಪ್ ಕಳೆದ ವರ್ಷ ನಡೆದಂತೆ ಸೂಪರ್ 12 ಪದ್ದತಿಯಲ್ಲಿ ಲೀಗ್ ಮ್ಯಾಚ್ ಗಳು ನಡೆಯಲಿವೆ.
ಗ್ರೂಪ್ ಒಂದರಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಆಫ್ಘಾನಿಸ್ತಾನ್ ಜೊತೆಗೆ ಮತ್ತೆರಡು ಕ್ವಾಲಿಫೈಯರ್ ತಂಡಗಳು ಬರಲಿವೆ.
ಗ್ರೂಪ್ 2 ರಲ್ಲಿ ಭಾರತ, ಪಾಕಿಸ್ತಾನ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶದ ಜೊತೆಗೆ ಮತ್ತೆರಡು ತಂಡಗಳು ಸೇರಿಕೊಳ್ಳಲಿವೆ.
ಲೀಗ್ ಮ್ಯಾಚ್ ಭಾಗವಾಗಿ, ಟೀಂ ಇಂಡಿಯಾ ಅಕ್ಟೋಬರ್ 23 ರಂದು ಪಾಕ್ ವಿರುದ್ಧ ಸೆಣಸಾಡಲಿದೆ. 30 ರಂದು ಸೌತ್ ಆಫ್ರಿಕಾ, ನವೆಂಬರ್ 2 ರಂದು ಬಾಂಗ್ಲಾದೇಶದ ವಿರುದ್ಧ ಆಡಲಿದೆ.