ಕೊಹ್ಲಿ ಬಂದಾಯ್ತು.. ಚರಿತ್ರೆ ಬರೆಯುತ್ತಾ ಭಾರತ..?
ಫ್ರೀಡಂ ಟ್ರೋಫಿಯ ವಿಜೇತರನ್ನು ನಿರ್ಧರಿಸುವ ಸಮಯ ಬಂದಾಗಿದೆ. ಮೂರು ಮ್ಯಾಚ್ ಗಳ ಸರಣಿ ಈಗಾಗಲೇ ಒಂದು ಒಂದರಿಂದ ಸಮಬಲವಾಗಿರುವುದರಿಂದ ಅಂತಿಮ ಟೆಸ್ಟ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.
2018ರಲ್ಲಿ ಟೀಂ ಇಂಡಿಯಾ ಮೊದಲೆರಡು ಪಂದ್ಯಗಳನ್ನು ಸೋತಿತ್ತು. ಆ ನಂತರ ಕೇಪ್ ಟೌನ್ ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟೀಂಇಂಡಿಯಾ ಗೆಲುವಿನ ನಗೆ ಬೀರಿತ್ತು.
ಇದೀಗ ಬದಲಾದ ಪರಿಸ್ಥಿತಿಯಲ್ಲಿ ಕೇಪ್ ಟೌನ್ ನಲ್ಲಿಯೇ ಇಂದು ಅಂತಿಮ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದರೇ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಇತಿಹಾಸ ಸೃಷ್ಟಿಸಲಿದೆ.
ಇಂದಿನಿಂದ ಶುರುವಾಗುವ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆಗಳು ಖಂಡಿತವಾಗಿಯೂ ನಡೆಯಲಿದೆ.
ಬೆನ್ನು ನೋವಿನಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗಿದ್ದ ವಿರಾಟ್, ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಹನುಮ ವಿಹಾರಿಗೆ ಬೆಂಚ್ ಕಾಯಬೇಕಾಗುತ್ತದೆ.
ಇತ್ತ ಅಜಿಂಕ್ಯಾ ರಹಾನೆ, ಎರಡನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ರೂ ಮೊದಲಿನ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಮತ್ತೊಂದೆಡೆ ಎರಡನೇ ಟೆಸ್ಟ್ ನಲ್ಲಿ ಮಂಡಿರಜ್ಜು ಗಾಯಕ್ಕೆ ಒಳಗಾದ ಹೈದರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ಅವರು ಪಂದ್ಯದಿಂದ ಹೊರಗುಳಿದರು. ಅವರ ಸ್ಥಾನಕ್ಕೆ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಆಯ್ಕೆಯಾಗಲಿದ್ದಾರೆ.