ADVERTISEMENT
Tuesday, March 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸ್ಕೈ ಗ್ಯಾಂಗ್‍ನಲ್ಲಿ ಆಡುವ 11 ಆಟಗಾರರು ಇವರೇ…!

admin by admin
December 9, 2025
in Newsbeat, Sports, ಕ್ರಿಕೆಟ್
Suryakumar yadav
Share on FacebookShare on TwitterShare on WhatsappShare on Telegram

ಸ್ಕೈ ಗ್ಯಾಂಗ್‍ನಲ್ಲಿ ಆಡುವ 11 ಆಟಗಾರರು ಇವರೇ…!

ಸದ್ಯ ಟೀಮ್ ಇಂಡಿಯಾದ ಟಿ-20 ತಂಡವನ್ನು ಆಯ್ಕೆ ಮಾಡೋದೇ ಆಯ್ಕೆ ಸಮಿತಿಗೆ ದೊಡ್ಡ ತಲೆನೋವು. ಕೊನೆಗೆ ಏನೇನೋ ಸರ್ಕಸ್ ಮಾಡಿ 15 ಸದಸ್ಯರ ತಂಡವನ್ನು ಪ್ರಕಟಿಸಿದ್ರೂ ಟೀಕೆ ಟಿಪ್ಪಣಿಗಳು ಮಾಮೂಲಿ. ಇದು ಇಷ್ಟಕ್ಕೆ ಮುಗಿಯಲ್ಲ. ಪಂದ್ಯ ಆರಂಭಕ್ಕೆ ಮುನ್ನ ಟೀಮ್ ಮ್ಯಾನೇಜ್‍ಮೆಂಟ್‍ಗೆ ಶುರುವಾಗುತ್ತೆ ಚಿಂತೆ. ಆಡುವ 11ರ ಬಳಗವನ್ನು ಆಯ್ಕೆ ಮಾಡುವ ಟೆನ್ಶನ್. ಯಾಕಂದ್ರೆ ಟೀಮ್ ಇಂಡಿಯಾದಲ್ಲಿ ಟಿ-20ಯ ಪಂಟರ್ ಆಟಗಾರರು ಕ್ಯೂನಲ್ಲಿ ನಿಂತಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣ ಐಪಿಎಲ್ ಎಂಬ ಹೈಫೈ ದೇಸಿ ಟೂರ್ನಿ.

Related posts

ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್

ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್

March 24, 2026
ಆನೆ ಮರಿಗೆ ಡಾ. ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ

ಆನೆ ಮರಿಗೆ ಡಾ. ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ

March 24, 2026

ಹೌದು, ಐಪಿಎಲ್ ಬಿಸಿಸಿಐಗೆ ದುಡ್ಡಿನ ಗಣಿಯಾದ್ರೆ, ಭಾರತದ ಯುವ ಕ್ರಿಕೆಟಿಗರಿಗೆ ಮಹಾ ವೇದಿಕೆ. ಸಾಕಷ್ಟು ಯುವ ಕ್ರಿಕೆಟಿಗರು ಐಪಿಎಲ್ ಮೂಲಕವೇ ಬೆಳಕಿಗೆ ಬಂದಿದ್ದಾರೆ. ಇನ್ನು ಕೆಲವರು ದೇಸಿ ಟೂರ್ನಿಯಲ್ಲಿ ಗಮನ ಸೆಳೆದು ಟೀಮ್ ಇಂಡಿಯಾದ ಕದತಟ್ಟುತ್ತಿದ್ದಾರೆ. ಹೀಗಾಗಿ ತಂಡವನ್ನು ಆಯ್ಕೆ ಮಾಡೋದೇ ಆಯ್ಕೆ ಸಮಿತಿಗೆ ದೊಡ್ಡ ಸವಾಲು.

ಇದೀಗ ಟೀಮ್ ಇಂಡಿಯಾ ಮುಂದಿನ ಟಿ-20 ವಿಶ್ವಕಪ್‍ಗೆ ರೆಡಿಯಾಗುತ್ತಿದೆ. 2026 ಫೆಬ್ರವರಿಯಲ್ಲಿ ನಡೆಯುವ ಚುಟುಕು ವಿಶ್ವ ಸಮರಕ್ಕೆ ಅಳೆದು ತೂಗಿ ತಂಡವನ್ನು ಆಯ್ಕೆ ಮಾಡಬೇಕು. ವಿಶ್ವಕಪ್‍ಗೆ ಮುನ್ನ ಸ್ಕೈ ಗ್ಯಾಂಗ್ ಹತ್ತು ಟಿ-20 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಐದು ಹಾಗೂ ಮುಂದಿನ ತಿಂಗಳು ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳನ್ನು ಆಡಲಿದೆ.

ಗಂಭೀರ್‍ಗೆ ಅಗ್ನಿಪರೀಕ್ಷೆ

ಹೀಗಾಗಿ ಟೀಮ್ ಇಂಡಿಯಾ ಹೊಸ ಪ್ರಯೋಗಗಳನ್ನು ನಡೆಸಬೇಕು. 15ರ ಬಳಗದ ಎಲ್ಲಾ ಆಟಗಾರರಿಗೂ ಅವಕಾಶ ನೀಡಬೇಕು. ಈ ಹಿಂದೆ ಇದೇ ರೀತಿಯ ಪ್ರಯೋಗವನ್ನು ರಾಹುಲ್ ದ್ರಾವಿಡ್ – ರೋಹಿತ್ ಶರ್ಮಾ ಕೂಡ ಮಾಡಿದ್ದರು. ಹಾಗೆ ಇದರಲ್ಲಿ ಯಶ ಕೂಡ ಸಾಧಿಸಿದ್ರು. 2024ರಲ್ಲಿ ಟಿ-20 ಚಾಂಪಿಯನ್ ಆಗಿದ್ದ ಟೀಮ್ ಇಂಡಿಯಾ ಇದೀಗ 2026ರ ವಿಶ್ವಕಪ್ ಮೇಲೆ ದೃಷ್ಟಿ ನೆಟ್ಟಿದೆ. ಇದು ಟೀಮ್ ಇಂಡಿಯಾಗೆ ಮಾತ್ರವಲ್ಲ ಹೆಡ್ ಕೋಚ್ ಗೌತಮ್ ಗಂಭೀರ್‍ಗೆ ಅಗ್ನಿಪರೀಕ್ಷೆ ಕೂಡ ಹೌದು. ಇಲ್ಲಿ ಸ್ವಾರ್ಥ, ಅಹಂ ಬಿಟ್ಟು ತಂಡದ ಹಿತಕ್ಕಾಗಿ ಬಲಿಷ್ಠ ತಂಡವನ್ನು ಆಯ್ಕೆ ಮಾಡೋ ದೊಡ್ಡ ಜವಾಬ್ದಾರಿ ಗಂಭೀರ್ ಮೇಲಿದೆ.

ಟೀಮ್ ಇಂಡಿಯಾ – ದಕ್ಷಿಣ ಆಫ್ರಿಕಾ ಅಂಕಿಅಂಶಗಳು

ಅಂದ ಹಾಗೇ ಇಂದು (ಡಿಸೆಂಬರ್ 9) ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟಿ-20 ಪಂದ್ಯ ಒಡಿಸ್ಸಾದ ಕಟಕ್‍ನಲ್ಲಿ ನಡೆಯಲಿದೆ. 2023ರಿಂದ ಟೀಮ್ ಇಂಡಿಯಾ 13 ಟಿ-20 ಸರಣಿಗಳಲ್ಲಿ 12 ಸರಣಿಗಳನ್ನು ಗೆದ್ದುಕೊಂಡಿದೆ. ಒಂದು ಸರಣಿ ಸಮಬಲಗೊಂಡಿದೆ. (ಇದರಲ್ಲಿ 2024ರ ಟಿ-20 ವಿಶ್ವಕಪ್ ಹಾಗೂ 2025ರ ಏಷ್ಯಾಕಪ್ ಸೇರಿಕೊಂಡಿದೆ) ಇನ್ನುಳಿದಂತೆ ಕಳೆದ ಟಿ-20 ವಿಶ್ವಕಪ್ ಬಳಿಕ ಆಡಿರುವ 30 ಪಂದ್ಯಗಳಲ್ಲಿ 26ರಲ್ಲಿ ಗೆಲುವಿನ ನಗೆ ಬೀರಿದೆ. ನಾಲ್ಕು ಪಂದ್ಯಗಳಲ್ಲಿ ಸೋತಿದೆ.
ಇನ್ನು ಇಂದಿನ ಪಂದ್ಯದ ಬಗ್ಗೆ ಹೇಳುವುದಾದ್ರೆ, ಅಂಕಿ ಅಂಶಗಳ ಪ್ರಕಾರ ದಕ್ಷಿಣ ಆಫ್ರಿಕಾ ತಂಡಕ್ಕಿಂತ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಆಡಿರುವ 31 ಪಂದ್ಯಗಳಲ್ಲಿ 18ರಲ್ಲಿ ಟೀಮ್ ಇಂಡಿಯಾ ಗೆದ್ರೆ, 12 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆದ್ದಿದೆ. ಒಂದು ಪಂದ್ಯದ ಫಲಿತಾಂಶ ಬಂದಿಲ್ಲ. ಹಾಗೇ ಉಭಯ ತಂಡಗಳ ನಡುವೆ ಹತ್ತು ಟಿ-20 ಸರಣಿ ನಡೆದಿದ್ದು, ಭಾರತ ಐದು ಸರಣಿ ಗೆದ್ದಿದೆ. ದಕ್ಷಿಣ ಆಫ್ರಿಕಾ ಒಂದು ಬಾರಿ ತವರಿನಲ್ಲಿ ಮತ್ತು ಇನ್ನೊಂದು ಬಾರಿ ಭಾರತದಲ್ಲಿ ಒಟ್ಟು ಎರಡು ಸರಣಿಗಳನ್ನು ಗೆದ್ದುಕೊಂಡಿದೆ. ಮೂರು ಸರಣಿಗಳು ಸಮಬಲದಲ್ಲಿ ಅಂತ್ಯಗೊಂಡಿವೆ.

ಸ್ಕೈ ಗ್ಯಾಂಗ್ ಲೆಕ್ಕಾಚಾರ

ಇನ್ನು, ಸ್ಕೈ ಗ್ಯಾಂಗ್‍ನಲ್ಲಿ ಆಡುವ 11ರ ಬಳಗದ ಲೆಕ್ಕಾಚಾರ. ಆರಂಭಿಕನಾಗಿ ಅಭಿಷೇಕ್ ಶರ್ಮಾ ಕಣಕ್ಕಿಳಿಯುವುದು ಪಕ್ಕಾ. ಇದಕ್ಕೆ ಸದ್ಯಕ್ಕೆ ಯಾರ ಅಡ್ಡಿಯೂ ಇರಲ್ಲ. ಆದ್ರೆ ಅಭಿ ಜೊತೆ ಶುಭ್ಮನ್ ಗಿಲ್ ಮತ್ತು ಸಂಜು ಸ್ಯಾಮ್ಸನ್ ಕಣಕ್ಕಿಳಿಸುವುದರ ಬಗ್ಗೆ ಗೊಂದಲ ಇದೆ. ಇನ್ನುಳಿದಂತೆ ನಾಯಕ ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಜಸ್ಪ್ರಿತ್ ಬೂಮ್ರಾ, ಕುಲದೀಪ್ ಆಯ್ಕೆಗೆ ಯಾವ ಪ್ರಶ್ನೆಗಳು ಬರಲ್ಲ. ವಿಕೆಟ್ ಕೀಪಿಂಗ್‍ನಲ್ಲಿ ಸಂಜು ಮತ್ತು ಜಿತೇಶ್ ಶರ್ಮಾ ನಡುವೆ ಪೈಪೋಟಿ ಇದೆ. ಹಾಗೇ ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ನಡುವೆಯು ಸ್ಪರ್ಧೆ ತೀವ್ರ ಸ್ಪರ್ಧೆ ಇದೆ. ಶಿವಂದುಬೆಗೆ ಲಕ್ಕಿ ಚಾರ್ಮ್ ಎಂಬ ಟ್ಯಾಗ್ ಲೈನ್ ಕೂಡ ಇದೆ. ಮತ್ತೊಂದೆಡೆ, ಗಂಭೀರ್‍ನ ನೀಲಿಗಣ್ಣಿನ ಹುಡುಗ ಹರ್ಷಿತ್ ರಾಣಾ ಮತ್ತು ಆರ್ಶಾದೀಪ್ ಪೈಕಿ ಯಾರು 11ರ ಬಳಗದಲ್ಲಿ ಕಾಣಿಸಿಕೊಳ್ತಾರೆ ಎಂಬ ಕುತೂಹಲವೂ ಇದೆ.

ಟೀಮ್ ಇಂಡಿಯಾದ 11ರ ಬಳಗ
ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಆರ್ಶಾದೀಪ್, ಜಸ್ಪ್ರಿತ್ ಬೂಮ್ರಾ.

ಸನತ್ ರೈ

Source: India vs South Africa T20 at Barabati Stadium
Via: India vs South Africa T20 at Barabati Stadium
Tags: #saakshatv#t-20cricket2025bccibengaluruCricketindiasouthafricateamindia
ShareTweetSendShare
Join us on:

Related Posts

ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್

ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್

by Shwetha
March 24, 2026
0

ಬೆಂಗಳೂರು: ರಾಜಕಾರಣದಲ್ಲಿ ಕೆಲಸ ಆಗಬೇಕೆಂದರೆ ಸಾಮ, ದಾನ, ಭೇದ, ದಂಡ ಎಲ್ಲವನ್ನೂ ಬಳಸಬೇಕು ಎಂಬ ಮಾತಿದೆ. ಆದರೆ, ಹಾಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್...

ಆನೆ ಮರಿಗೆ ಡಾ. ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ

ಆನೆ ಮರಿಗೆ ಡಾ. ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ

by Shwetha
March 24, 2026
0

ಇತ್ತೀಚೆಗೆ ಶಿವಮೊಗ್ಗ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಟ್ರೈನಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಮೃತಪಟ್ಟ ಘಟನೆ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಈ ಹಿನ್ನೆಲೆ, ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ...

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವೇ ಗುರಿ: ವಿಜಯೇಂದ್ರ

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವೇ ಗುರಿ: ವಿಜಯೇಂದ್ರ

by Shwetha
March 24, 2026
0

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದೇ ಮುಖ್ಯ ಗುರಿ ಎಂದು B. Y. ವಿಜಯೇಂದ್ರ ತಿಳಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಈ ಎರಡೂ...

ಚಿನ್ನದ ಮೇಲೆ ಹೂಡಿಕೆ ಮಾಡುವವರೇ ಎಚ್ಚರ! ಚಿನ್ನದ ಮೌಲ್ಯ ಪಾತಾಳಕ್ಕೆ!ಹಳದಿ ಲೋಹದ ದಿಢೀರ್ ಪತನಕ್ಕೆ ಅಸಲಿ ಕಾರಣವೇನು?

ಚಿನ್ನದ ಮೇಲೆ ಹೂಡಿಕೆ ಮಾಡುವವರೇ ಎಚ್ಚರ! ಚಿನ್ನದ ಮೌಲ್ಯ ಪಾತಾಳಕ್ಕೆ!ಹಳದಿ ಲೋಹದ ದಿಢೀರ್ ಪತನಕ್ಕೆ ಅಸಲಿ ಕಾರಣವೇನು?

by Shwetha
March 24, 2026
0

ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಸುರಕ್ಷಿತ ಹೂಡಿಕೆ ಎಂದೇ ಕರೆಯಲ್ಪಡುವ ಚಿನ್ನದ ಸಾಮ್ರಾಜ್ಯದಲ್ಲಿ ಬಲವಾದ ಭೂಕಂಪ ಸಂಭವಿಸಿದೆ. ಯುದ್ಧದ ಭೀತಿ ಇದ್ದಾಗ ಸಾಮಾನ್ಯವಾಗಿ ಚಿನ್ನದ ಬೆಲೆ ಗಗನಕ್ಕೇರುವುದು ವಾಡಿಕೆ....

ಮುಂದಿನ 2 ವರ್ಷವೂ ಸಿದ್ದರಾಮಯ್ಯನವರೇ ಬಜೆಟ್ ಮಂಡಿಸುವುದು ನಿಶ್ಚಿತ‌ : ಜಮೀರ್ ಅಹಮದ್ ಖಾನ್

ಮುಂದಿನ 2 ವರ್ಷವೂ ಸಿದ್ದರಾಮಯ್ಯನವರೇ ಬಜೆಟ್ ಮಂಡಿಸುವುದು ನಿಶ್ಚಿತ‌ : ಜಮೀರ್ ಅಹಮದ್ ಖಾನ್

by Shwetha
March 24, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು, ಎರಡುವರೆ ವರ್ಷದ ಅಧಿಕಾರ ಹಂಚಿಕೆಯ ಸೂತ್ರದ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಚಿವ ಜಮೀರ್ ಅಹಮದ್ ಖಾನ್ ವಿಧಾನಸಭೆಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram