Ind vs Zim 3RD ODI : ವೃತ್ತಿ ಜೀವನ ಮೊದಲ ಶತಕ ಗಳಿಸಿದ ಶುಭಮನ್ ಗಿಲ್
ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರನೇ ಏಕದಿನ ಪಂದ್ಯ ಇಂದು ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಭಾರತ ತಂಡ 50 ಓವರ್ಗಳಲ್ಲಿ 8 ವಿಕೆಟ್ಗೆ 289 ರನ್ ಗಳಿಸಿತು. ಉತ್ತರವಾಗಿ ಜಿಂಬಾಬ್ವೆ 8 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿತು. ಶಾನ್ ವಿಲಿಯಮ್ಸ್ ಮತ್ತು ಟೋನಿ ಮುನ್ಯೊಂಗಾ ಕ್ರೀಸ್ನಲ್ಲಿದ್ದಾರೆ.
ಈ ಪಂದ್ಯದಲ್ಲಿ ಭಾರತದ ಪರ ಶುಭಮನ್ ಗಿಲ್ ಗರಿಷ್ಠ ರನ್ ಗಳಿಸಿದ್ದಾರೆ. ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದ್ದಾರೆ. 97 ಎಸೆತಗಳಲ್ಲಿ 130 ರನ್ ಗಳಿಸಿದರು. ಇಶಾನ್ ಕಿಶನ್ ತಮ್ಮ ODI ವೃತ್ತಿಜೀವನದ ಎರಡನೇ ಅರ್ಧಶತಕವನ್ನ ಗಳಿಸಿದ್ದಾರೆ. ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ ಅದ್ಭುತ ಬೌಲಿಂಗ್ ಮಾಡಿ 5 ವಿಕೆಟ್ ಪಡೆದರು.
ಪಂದ್ಯಕ್ಕೂ ಮೊದಲು ಭಾರತದ ಪ್ಲೇಯಿಂಗ್-11 ರಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ ಅವರ ಸ್ಥಾನದಲ್ಲಿ ದೀಪಕ್ ಚಹಾರ್ ಮತ್ತು ಅವೇಶ್ ಖಾನ್ ಅವರಿಗೆ ಅವಕಾಶ ನೀಡಲಾಗಿದೆ.
ಜಿಂಬಾಬ್ವೆ ವಿರುದ್ಧ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ
ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತ ತಂಡ ಇಂದು ಜಿಂಬಾಬ್ವೆ ವಿರುದ್ಧ ಕ್ಲೀನ್ ಸ್ವೀಪ್ ಮಾಡುವ ಮೂಲಕ ಪಾಕಿಸ್ತಾನದ ದಾಖಲೆಯನ್ನು ಸರಿಗಟ್ಟುವ ನಿರೀಕ್ಷೆಯಲ್ಲಿದೆ. ಪಾಕಿಸ್ತಾನ ಇದುವರೆಗೆ ಜಿಂಬಾಬ್ವೆ ವಿರುದ್ಧ 62 ಪಂದ್ಯಗಳನ್ನು ಆಡಿದ್ದು, 54 ಪಂದ್ಯಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ, ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ 65 ಪಂದ್ಯಗಳನ್ನು ಆಡಿದೆ ಮತ್ತು ಅವರು 53 ಪಂದ್ಯಗಳನ್ನು ಗೆದ್ದಿದ್ದಾರೆ. ಇಂದು ಕೆಎಲ್ ರಾಹುಲ್ ನೇತೃತ್ವದ ತಂಡ ಜಿಂಬಾಬ್ವೆ ವಿರುದ್ಧ ಜಯ ಸಾಧಿಸಿದರೆ, ಜಿಂಬಾಬ್ವೆ ವಿರುದ್ಧ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಗೆದ್ದ ಪಾಕಿಸ್ತಾನದ ದಾಖಲೆಯನ್ನು ಭಾರತ ಸರಿಗಟ್ಟಲಿದೆ.