ಕಡಿಮೆ ಬೆಲೆಯಲ್ಲಿ ತೈಲ ನೀಡುವಂತೆ ರಷ್ಯಾ ಜೊತೆಗೆ ಭಾರತ ಮಾತುಕತೆ
ನವದೆಹಲಿ: ನಿಗದಿಪಡಿಸಿರುವ ದರಕ್ಕಿಂತಲೂ ಕಡಿಮೆ ದರದಲ್ಲಿ ತೈಲ ನೀಡುವಂತೆ ಭಾರತ ರಷ್ಯಾ ಜೊತೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ರಷ್ಯಾ ಈಗಾಗಲೇ 70 ಡಾಲರ್ಗೆ(5,300 ರೂ.)ಕಚ್ಚಾ ತೈಲ ನೀಡುವುದಾಗಿ ಪ್ರಕಟಿಸಿದೆ. ಈ ಬೆಲಯು ಅಂತರಾಷ್ರ್ಟೀಯ ಮಾರುಕಟ್ಟೆ ಬೆಲೆಗಿಂತಲೂ ಕಡಿಮೆ ಬೆಲೆಯಾಗಿದೆ. ಆದರೆ ಭಾರತ ಅದಕ್ಕಿಂತಲೂ ಕಡಿಮೆ ದರದಲ್ಲಿ ತೈಲವನ್ನು ಪೊರೈಸುವಂತೆ ಮಾತುಕತೆ ನಡೆಸುತ್ತಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬಳಿಕ, ರಷ್ಯಾದಿಂದ ತೈಲ ಖರೀದಿಸದಂತೆ ಅಮೆರಿಕ, ಯುರೋಪಿಯನ್ ಒಕ್ಕೂಟ ಭಾರತಕ್ಕೆ ಮನವಿ ಮಾಡುತ್ತಿದೆ. ಆದರೂ ಕೂಡಾ ಭಾರತ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ.
ಈ ಸಂಬಂಧ ಒಪೆಕ್ ರಾಷ್ಟ್ರಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖರೀದಿಗೆ ವಿರೋಧವಿದ್ದರೂ ನಾವು ನಿಮ್ಮ ಜೊತೆ ತೈಲ ಖರೀದಿಸುತ್ತಿದ್ದೇವೆ. ಹೀಗಾಗಿ ದರವನ್ನು ಮತ್ತಷ್ಟು ಇಳಿಸಿ ಎಂದು ರಷ್ಯಾದ ತೈಲ ಕಂಪನಿಗಳ ಜೊತೆ ಭಾರತ ಮಾತನಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.