ಭಾರತಕ್ಕೆ ಹಸ್ತಾಂತರಿಸದಂತೆ ನೀರವ್ ಮನವಿ – ತಿರಸ್ಕರಿಸಿದ ಬ್ರಿಟೀಷ್ ಕೋರ್ಟ್
ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಲಾಯನ ಗೈದಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಮನವಿಯನ್ನ ಬ್ರಿಟಿಷ್ ನ್ಯಾಯಾಲಯ ತಿರಸ್ಕರಸಿದೆ. ಭಾರತಕ್ಕೆ ಹಸ್ತಾಂತರಿಸದಂತೆ ನೀರವ್ ಸಲ್ಲಿಸಿದ್ದ ಮನವಿಯನ್ನ ತಿರಸ್ಕರಿಸಿ ನ್ಯಾಯಾಲಯದ ತೀರ್ಪನ್ನ ಗುರುವಾರ ಭಾರತ ಸ್ವಾಗತಿಸಿದೆ.
ನೀರವ್ ಮೋದಿ ಹಸ್ತಾಂತರದ ವಿರುದ್ಧದ ಮೇಲ್ಮನವಿಯನ್ನು ವಜಾಗೊಳಿಸಿದ ಯುಕೆ ಹೈಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. “ನೀರವ್ ಮೋದಿ ಮತ್ತು ಇತರ ಆರ್ಥಿಕ ಅಪರಾಧಿಗಳನ್ನು ಮರಳಿ ಪಡೆಯುವ ನಮ್ಮ ಪ್ರಯತ್ನಗಳನ್ನು ನಾವು ಮುಂದುವರಿಸುತ್ತೇವೆ ಎಂದಿದ್ದಾರೆ”
ಇದೇ ರೀತಿ ಪರಾರಿಯಾಗಿರುವ ಶಸ್ತ್ರದ ವ್ಯಾಪಾರಿ ಸಂಜಯ್ ಭಂಡಾರಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಇತ್ತೀಚೆಗೆ ಮತ್ತೊಂದು ಯುಕೆ ನ್ಯಾಯಾಲಯದ ತೀರ್ಪನ್ನ ಬಾಗ್ಚಿ ಉಲ್ಲೇಖಿಸಿದ್ದಾರೆ.
“ಸಂಜಯ್ ಭಂಡಾರಿಯವರ ಪ್ರಕರಣವೂ ಇದೇ ರೀತಿಯದ್ದಾಗಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪರವಾಗಿ ಮತ್ತೊಂದು ನ್ಯಾಯಾಲಯವು ತೀರ್ಪು ನೀಡುವುದನ್ನು ನಾವು ನೋಡಿದ್ದೇವೆ. ಇದು ಸಾಮಾನ್ಯವಾಗಿ ಸುದೀರ್ಘ ಪ್ರಕ್ರಿಯೆಯಾಗಿದೆ. ಆದರೆ ನಾವು ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ” ಎಂದಿದ್ದಾರೆ.
India welcomes UK court’s decision rejecting Nirav Modi’s appeal against extradition